ಬಾರುಕೋಲು ಬೀಸಿ ರೈತರಿಂದ ಪ್ರತಿಭಟನೆ

14541
Published on

ಬೆಳಗಾವಿ: ಕೇಂದ್ರ ಸರ್ಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ನಗರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹಾಗೂ ಚನ್ನಮ್ಮ ವೃತ್ತದಲ್ಲಿ ಭಾನುವಾರ ರೈತ ಮುಖಂಡರು ಪ್ರತಿಭಟನೆ ನಡೆಸಿದರು.

ಬಾರುಕೋಲು ಬೀಸುವ ಮೂಲಕ ಉಭಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಮಿತ್ ಷಾ ವಿರುದ್ಧ ಧಿಕ್ಕಾರ ಕೂಗಿದರು. ಉರುಳುವ ಮೂಲಕ ಅಸಮಾಧಾನ ಹೊರಹಾಕಿದರು. ಅಲ್ಲದೇ ‘ಮಾನ್ಯ ಅಮಿತ್ ಷಾ ಅವರಿಗೆ ಸ್ವಾಗತ. ರೈತರ ಬಳಿ ಬಂದು ಕಾನುನು ತಿಳಿಸಿ’ ಎಂಬ ನಾಮಫಲಕ ಹಿಡಿದು ಪ್ರತಿಭಟಿಸಿದ್ದು ವಿಶೇಷವಾಗಿತ್ತು.

ಪೊಲೀಸರು ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರನ್ನು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ಮತ್ತು ರೈತರ ಮಧ್ಯೆ ವಾಗ್ವಾದ ನಡೆಯಿತು. ಬಾಯಿ ಬಾಯಿ ಬಡಿದುಕೊಂಡು ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಚೂನಪ್ಪ ಪೂಜೇರಿ, ರಾಘವೇಂದ್ರ ನಾಯಕ, ಪ್ರಕಾಶ ನಾಯಕ, ಮಲ್ಲಿಕಾ ವಾಗಿ, ಅಂಬಿಕಾ ಪರದೇಶಿ, ಈರಣ್ಣ ಸಸಾಲಟ್ಟಿ, ಚಂದ್ರಶೇಖರ ಹಟ್ಟಿಹೊಳಿ ಹಾಗೂ ರೈತ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net