

ಕೊಳ್ಳೇಗಾಲ : ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವ ಸುಮಾರು 2.30 ಲಕ್ಷ ಮೌಲ್ಯದ 25 ಬ್ಯಾರಿಕೇಡ್‌ಗಳನ್ನು ರಾಮ್ಕೋ ಸಿಮೆಂಟ್ ಕಂಪನಿ ಬುಧವಾರ ಪಟ್ಟಣ ಪೊಲೀಸ್ ಠಾಣೆಗೆ ಕೊಡುಗೆಯಾಗಿ ನೀಡಿ ಸಾಮಾಜಿಕ ಕಳಕಳಿ ಮೆರೆದಿದೆ. ಪಟ್ಟಣ ಪೊಲೀಸ್ ಠಾಣೆಯ ಮುಂಭಾಗ ಕಂಪನಿಯ ವಹಿವಾಟು ಅಧಿಕಾರಿ ಹರ್ಷಿತ್ ಪಟ್ಟಣ ಪೊಲೀಸ್ ಠಾಣೆ ಪಿಎಸ್‌ಐ ಮಹೇಶ್ ಕುಮಾರ್ ಮೂಲಕ ಬ್ಯಾರಿಕೇಡ್‌ಗಳನ್ನು ಹಸ್ತಾಂತರ ಮಾಡಿದರು.
ಪಿಎಸ್‌ಐ ಮಹೇಶ್‌ಕುಮಾರ್, ಕಂಪನಿ ತಾಂತ್ರಿಕ ಅಧಿಕಾರಿ ಯಶವಂತ್ ಇತರರು ಇದ್ದರು.