ಶಾಲಾ ಮಕ್ಕಳ ವ್ಯಾಸಂಗಕ್ಕೆ ತಡೆಬೇಲಿ ಅಡ್ಡಿ

__ಮೈತ್ರಿ ಕಾನ್ವೆಂಟ್ ಮುಂದಿನ ತಡೆ ಬೇಲಿ ತೆರವು ಮಾಡುವಂತೆ ಆಗ್ರಹಿಸಿ ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಆಶಾ, ಪುಷ್ಪಾ ಇದ್ದರು.
__ಮೈತ್ರಿ ಕಾನ್ವೆಂಟ್ ಮುಂದಿನ ತಡೆ ಬೇಲಿ ತೆರವು ಮಾಡುವಂತೆ ಆಗ್ರಹಿಸಿ ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಆಶಾ, ಪುಷ್ಪಾ ಇದ್ದರು.
Published on

ಅರಸೀಕೆರೆ: ತಡೆ ಬೇಲಿ ನಿರ್ಮಿಸಿ ಶಾಲಾ ಮಕ್ಕಳ ವ್ಯಾಸಂಗಕ್ಕೆ ಅಡ್ಡಿಪಡಿಸುತ್ತಿರುವ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮೈತ್ರಿ ಶಾಲೆ ಕಾರ್ಯದರ್ಶಿ ಧರ್ಮರಾಜ ಕಡಗ ಮನವಿ ಮಾಡಿದರು.

ನಗರದ ತಾಲೂಕು ಕಚೇರಿಯಲ್ಲಿ ಶುಕ್ರವಾರ ತಹಸೀಲ್ದಾರ್‌ಎಂ.ಜಿ. ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ತಾಲೂಕಿನ ಗಂಡಸಿ ಹ್ಯಾಂಡ್‌ಪೋಸ್ಟ್ ಗ್ರಾಮದಲ್ಲಿ ಮೈತ್ರಿ ಕಾನ್ವೆಂಟ್ ಶಾಲೆ 30 ವರ್ಷಗಳಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ. ಕಾನ್ವೆಂಟಿನಲ್ಲಿ ಕಲಿತ ಸಹಸ್ರಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಉತ್ತಮ ಹೆಸರು ಪಡೆದಿರುವ ಸಂಸ್ಥೆಗೆ ಕಳೆದ ಒಂದು ತಿಂಗಳಿಂದ ವೆಂಕಟೇಶ್ ಎಂಬಾತ ತೊಂದರೆ ನೀಡುತ್ತಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಶಾಲೆಯ ಮುಂಭಾಗ ರಸ್ತೆ ಬಂದ್ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಒಂದು ಕಿ.ಮೀ. ಸುತ್ತಿ ಬಳಸಿ ಬಿಸಿಲಿನಲ್ಲಿ ನಡೆದುಕೊಂಡು ಬಂದು ತರಗತಿಗೆ ಹೋಗಬೇಕಾಗಿದೆ. ಸ್ಥಳ ಪರಿಶೀಲನೆ ನಡೆಸಿ ದಾರಿ ತೆರವು ಮಾಡಿಸಬೇಕು ಎಂದು ಒತ್ತಾಯಿಸಿದರು.

ಶಾಲೆ ಮುಖ್ಯಶಿಕ್ಷಕಿ ಆಶಾ, ಸಹಶಿಕ್ಷಕರಾದ ಪುಷ್ಪಾ, ಪಾಲಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net