ಮಾಜಿ ಶಾಸಕ ರಾಮಪ್ಪ ನಿವಾಸಕ್ಕೆ ಬಿಜೆಪಿಯಿಂದ ಮುತ್ತಿಗೆ

Hrr22Bjp1
Published on

ಹರಿಹರ: ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ವಿರುದ್ಧ ಸುಳ್ಳು ಆರೋಪ ಮಾಡಿ ದಾಖಲೆ ನೀಡುವಲ್ಲಿ ವಿಫಲವಾದ ಮಾಜಿ ಶಾಸಕ ಎಸ್. ರಾಮಪ್ಪ ಅವರ ನಿವಾಸಕ್ಕೆ ಸೋಮವಾರ ಮುತ್ತಿಗೆ ಹಾಕಲು ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು.

ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಭೈರನಪಾದ ಸಮೀಪ ಸಕ್ಕರೆ ಕಾರ್ಖಾನೆಗಾಗಿ ಗುಡ್ಡ ಒತ್ತುವರಿ ಹಾಗೂ ಕಾಲೇಜು ನಿರ್ಮಾಣ ಮಾಡಲು ಕೈಗಾರಿಕೆಗೆ ಮೀಸಲಿಟ್ಟ ಜಾಗವನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ರಾಮಪ್ಪ ಆರೋಪ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಮಾಜಿ ಶಾಸಕರು ಒಂದು ವಾರದೊಳಗೆ ದಾಖಲೆ ನೀಡದಿದ್ದರೆ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದ್ದರು.

ಈ ವೇಳೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಮಾತನಾಡಿ, ಮಾಜಿ ಶಾಸಕ ಎಸ್. ರಾಮಪ್ಪ ಅವರು ಜಿಲ್ಲಾ ಕಾಂಗ್ರೆಸ್ ವರಿಷ್ಠರ ಓಲೈಕೆ ಮಾಡಿ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆಯುವ ತಂತ್ರವಾಗಿ ಜಿ.ಎಂ. ಸಿದ್ದೇಶ್ವರ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಗಡುವು ನೀಡಿ 15 ದಿನ ಕಳೆದರೂ ದಾಖಲೆ ನೀಡಿಲ್ಲ. ಅದ್ದರಿಂದ ಸುಳ್ಳು ಆರೋಪ ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗರಾಜ್ ಹಿಂಡಸಘಟ್ಟ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಎಲ್ಲರೂ ಸುಳ್ಳು ಆರೋಪ ಮಾಡುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ. ಎಸ್. ರಾಮಪ್ಪ ಸಹ ಇದಕ್ಕೆ ಹೊರತಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯ ಎ.ಕೆ. ಹನುಮಂತಪ್ಪ ಆಟೋ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣೇಶ್ ಐರಣಿ, ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಪ್ರಧಾನ ಕಾರ್ಯದರ್ಶಿಗಳಾದ ತುಳಜಪ್ಪ ಭೂತೆ, ವೀರೇಶ್ ಆದಾಪುರ, ಬಾತಿ ಚಂದ್ರಶೇಖರ್, ರಾಘವೇಂದ್ರ ಉಪಾಧ್ಯಾ, ನಾಗರಾಜ ಭಂಡಾರಿ, ಗಿರೀಶ್ ಹಳ್ಳದಕೇರಿ, ಸಂತೋಷ್ ಗುಡಿಮನಿ, ಅಜ್ಜಪ್ಪ ಶೇರಾಪುರ, ಜಿಗಳಿ ಹನುಮಗೌಡ, ಸಿದ್ದಪ್ಪ ಸಾಲಕಟ್ಟಿ, ರವಿ ರಾಯ್ಕರ್, ರವಿರಾಜ್ ತಾವರಗಿ, ಎ.ಸಿ. ಆನಂದ್, ಆದಿತ್ಯ ಮೆಹರ್ವಾಡೆ, ಮೋತಿಲಾಲ್ ಸೋಳಂಕಿ, ಐರಣಿ ರಾಜು, ರಾಜು ಖಿರೋಜಿ, ರುದ್ರೇಶ್ ಸೇರಿ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net