ಅರಕಲಗೂಡು : ತಾಲೂಕಿನ ಹಾನಗಲ್ ಸಮೀಪದ ಕರ್ಕಿಕೊಪ್ಪಲು ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ಹೊಗೆಸೊಪ್ಪು ಹದಗೊಳಿಸುತ್ತಿದ್ದ ಬ್ಯಾರಲ್ ಮನೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ. ಊರಿನ ರೈತ ಲೋಕೇಶ್ ಎಂಬುವರಿಗೆ ಸೇರಿದ ಬ್ಯಾರಲ್ ಮನೆಯಲ್ಲಿ ಹದಗೊಳಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸುಮಾರು 400 ಕೆ.ಜಿ. ತೂಕದ ತಂಬಾಕು ಸುಟ್ಟು ಬೂದಿಯಾಗಿದೆ. ಬ್ಯಾರಲ್ ಮನೆ ಪೈಪ್‌ಸೆಟ್ ಗಳು ಛಾವಣಿ ಬೆಂಕಿಗೆ ಬೆಂದು ನಾಶವಾಗಿದೆ. ಅರಕಲಗೂಡು ಅಗ್ನಿ ಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಬ್ಯಾರಲ್ ಮನೆ ಪೂರ್ತಿ ಬೆಂಕಿಗೆ ಕೆನ್ನಾಲಿಗೆಗೆ ಸುಟ್ಟು ಬೂದಿಯಾಗಿತ್ತು.