ಪ್ರಚಾರದ ಹಂಗಿಲ್ಲದೆ ಬಾರ್ಕೂರು ಫೇಸ್‌ಬುಕ್ ಗ್ರೂಪ್ ನೆರವು

facebook new
Published on

ಬ್ರಹ್ಮಾವರ: ಹನ್ನೊಂದು ಸಾವಿರ ಸದಸ್ಯರನ್ನು ಹೊಂದಿರುವ ‘ನಮ್ಮೂರು ಬಾರ್ಕೂರು ಫೇಸ್‌ಬುಕ್ ಗ್ರೂಪ್’ ಕಳೆದ ವರ್ಷ ಮತ್ತು ಈ ವರ್ಷ ಕೋವಿಡ್ ಸಂದರ್ಭ ಸಮಾಜಮುಖಿ ಕಾರ್ಯ ಮಾಡಿದೆ.

ಗುಂಪಿನ ಸದಸ್ಯರು ಮತ್ತು ದಾನಿಗಳು ಸೇರಿ ಬಾರ್ಕೂರು ಪರಿಸರದ ಬಡವರನ್ನು ಗುರುತಿಸಿ ಕಳೆದ ವರ್ಷ 650 ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ್ದರು. ಈ ವರ್ಷ ಪರವೂರ, ಪರದೇಶದ ದಾನಿಗಳು ಗ್ರೂಪ್ ಅಡ್ಮಿನ್‌ಗಳ ಜತೆ ಚರ್ಚಿಸಿ ತೀರಾ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಬಾರ್ಕೂರು ಪರಿಸರದ 50 ಕುಟುಂಬಗಳಿಗೆ ತಲಾ 4000 ರೂ. ಧನಸಹಾಯ ನೀಡಿದ್ದಾರೆ.

ಪ್ರಚಾರದ ಹಂಗು ಇಲ್ಲ

ಈ ಸೇವೆಯಲ್ಲಿ ವಿಶೇಷ ಎಂದರೆ ದಾನಿಗಳು ಯಾರು ಎಂಬುದು ಗ್ರೂಪ್ ಅಡ್ಮಿನ್‌ಗಳಿಗೆ ಮಾತ್ರ ತಿಳಿದಿರುತ್ತದೆ. ನೆರವು ನೀಡಿದ್ದು ಯಾರಿಗೆ ಎನ್ನುವುದು ಕೂಡ ಗ್ರೂಪ್ ಅಡ್ಮಿನ್ ಮತ್ತು ದಾನಿಗಳಿಗೆ ಮಾತ್ರ ತಿಳಿದಿದೆ. ಯಾವುದೇ ವೀಡಿಯೋ - ಫೋಟೋ ಇಲ್ಲದೆ ನೇರವಾಗಿ ಸಂಕಷ್ಟದಲ್ಲಿರುವ ಮನೆಗಳಿಗೆ ಸಹಾಯ ತಲುಪಿಸಲಾಗಿದೆ. ಸಾಮಾಜಿಕ ಜಾಲತಾಣಗಳು ಸಮಾಜದಲ್ಲಿ ಅಶಕ್ತರಿಗೆ ನೆರವಾಗಬಹುದು ಎನ್ನುವುದಕ್ಕೆ ನಮ್ಮೂರು ಬಾರ್ಕೂರು ಫೇಸ್‌ಬುಕ್ ಮಾದರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net