ಬರ್ಬರೀಕ ನಾಟಕ ರಾಷ್ಟ್ರಮಟ್ಟಕ್ಕೆ ಆಯ್ಕೆ

barbarika
ಉಡುಪಿ ಜಿಲ್ಲೆಯ ಶಿಕ್ಷಕರ ತಂಡ ಶಶಿರಾಜ್ ಕಾವೂರು ರಚಿಸಿದ ಬರ್ಬರೀಕ ನಾಟಕ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಮತ್ತೊಮ್ಮೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ
Published on

ಗಂಗೊಳ್ಳಿ: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡ ಜಿಲ್ಲಾ ಶಿಕ್ಷಕರ ತಂಡದ ಶಶಿರಾಜ್ ಕಾವೂರು ರಚಿಸಿದ ಬರ್ಬರೀಕ ನಾಟಕಕ್ಕೆ ಪ್ರಥಮ ಸ್ಥಾನ ಲಭಿಸಿದ್ದು, ಮತ್ತೊಮ್ಮೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಎರಡು ವರ್ಷದ ಹಿಂದೆ ರಾಷ್ಟ್ರ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದ ಈ ನಾಟಕ ಈ ಬಾರಿ ಹೊಸ ವಿನ್ಯಾಸ ಮತ್ತು ವಿಭಿನ್ನ ಸಂಯೋಜನೆಯೊಂದಿಗೆ ಮತ್ತೊಮ್ಮೆ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡಿತು.

ಬಿ.ಎಸ್.ರಾಂ ಶೆಟ್ಟಿ ನಿರ್ದೇಶನದಲ್ಲಿ ಪ್ರದರ್ಶನಗೊಂಡ ನಾಟಕಕ್ಕೆ ವಿಜಯ್ ಕುಮಾರ್ ಕುಂಭಾಶಿ ಗೀತ ಸಾಹಿತ್ಯ, ದಿವಾಕರ ಕಟೀಲ್ ಸಂಗೀತ ಸಂಯೋಜನೆ, ರಮೇಶ್ ಕಪಿಲೇಶ್ವರ ಅವರ ರಂಗಸಜ್ಜಿಕೆ ಮತ್ತು ವಸ್ತ್ರಾಲಂಕಾರವಿತ್ತು. ರವಿ ಎಸ್.ಪೂಜಾರಿ ಬೈಕಾಡಿ ನೇತೃತ್ವದ ಶಿಕ್ಷಕರ ತಂಡದಲ್ಲಿ ಹರೀಶ್ ಪೂಜಾರಿ ಎಸ್, ನಾಗರತ್ನ ಗುಂಡ್ಮಿ, ವನಿತಾ ಶೆಟ್ಟಿ ಚೇರ್ಕಾಡಿ, ದಿನೇಶ್ ಶೆಟ್ಟಿ ಕಾರ್ಕಳ, ಲಕ್ಷ್ಮೀನಾರಾಯಣ ಪೈ ಕನ್ನಾರು, ಸತೀಶ್ ಬೇಳಂಜೆ, ಸುರೇಂದ್ರ ಕೋಟ, ರವೀಂದ್ರ ಶೆಟ್ಟಿ ಕೊಂಡಾಡಿ, ಸದಾಶಿವ ಕೆಂಚನೂರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net