ಕ್ಯಾಲನೂರು: ಕೋಲಾರ ತಾಲೂಕಿನ ಚನ್ನಸಂದ್ರದ ಹೊರವಲಯದಲ್ಲಿ ಕುರಿಗಾಹಿಯನ್ನು ದುಷ್ಕರ್ಮಿಗಳು ಶುಕ್ರವಾರ ಬರ್ಬರವಾಗಿ ಕೊಲೆಮಾಡಿದ್ದಾರೆ.
ಚನ್ನಸಂದ್ರ ಗ್ರಾಮದ ನಾಗರಾಜ್ (45) ಹತ್ಯೇಗಿಡಾದವರು. ನಾಗರಾಜ್ ಅವರು ಕುರಿ ಮೇಯಿಸುವುದರ ಜತೆಗೆ ೈನಾನ್ಸ್ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದರು. ತಮ್ಮ ಬಳಿ ಎಷ್ಟೇ ಹಣವಿದ್ದರೂ ಮನೆಯಲ್ಲಿರಿಸದೆ ಜೇಬಿನಲ್ಲೇ ಇರಿಸಿಕೊಳ್ಳುವ ಹವ್ಯಾಸ ಹೊಂದಿದ್ದರು. ಅದರಂತೆ ಶುಕ್ರವಾರ ಯಾರೋ 2 ಲಕ್ಷ ರೂ. ಸಾಲವನ್ನು ನಾಗರಾಜ್ ಅವರಿಗೆ ಮರಳಿಸಿದ್ದು, ಈ ಹಣ ದೋಚಲೆಂದೇ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಾಗರಾಜ್ ಅವರಿಂದ ಸಾಲ ಪಡೆದವರು ವಾಪಸ್ ಮಾಡಲಾಗದೆ ಹತ್ಯೆಗೈದಿರಬಹುದೆಂದೂ ಶಂಕಿಸಲಾಗಿದೆ. ಸ್ಥಳಕ್ಕೆ ಕೋಲಾರ ಎಸ್ಪಿ ಬಿ.ನಿಖಿಲ್ ಭೇಟಿ ನೀಡಿ, ಪರಿಶೀಲಿಸಿದ್ದು, ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.