ಪತ್ನಿಗೆ ಮೆಸೇಜ್ ಮಾಡಿದ ವ್ಯಕ್ತಿಯ ಬರ್ಬರ ಹತ್ಯೆ

crime-300x200
Published on

ರಾಯಚೂರು: ಪತ್ನಿಗೆ ಅಸಭ್ಯವಾಗಿ ಮೆಸೇಜ್ ಮಾಡಿದ ವ್ಯಕ್ತಿಯನ್ನು ಪತಿ ಕುಡುಗೋಲಿನಿಂದ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸಿಂಧನೂರು ತಾಲೂಕಿನ ಬಳಗಾನೂರು-ತುಗ್ಗಲದಿನ್ನಿ ಗ್ರಾಮಗಳ ಮಧ್ಯದಲ್ಲಿ ಮಂಗಳವಾರ ಜರುಗಿದೆ.
ತುಗ್ಗಲದಿನ್ನಿ ಗ್ರಾಮದ ಆಂಜಿನೇಯ ದೇವಸ್ಥಾನದ ಪೂಜಾರಿ ಮಾರುತಿಯ ಪತ್ನಿಯ ಮೇಲೆ ಕಣ್ಣು ಹಾಕಿದ್ದ ಬಳಗಾನೂರು ಗ್ರಾಮದ ಖಾದರ್ ಬಾಷಾ (28) ಮೆಸೇಜ್ ಮಾಡುತ್ತಿದ್ದ. ಇದರಿಂದ ಆಕ್ರೋಶಗೊಂಡ ಮಾರುತಿ ಖಾದರ್ ಬಾಷಾದ ಕಣ್ಣು ಕಿತ್ತು, ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಬಳಗಾನೂರು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಕೊಲೆಯಲ್ಲಿ ಇನ್ನಿತರರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಬಿ.ನಿಖಿಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಗಾನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net