ಬಳ್ಳಾರಿ : ಇಲ್ಲಿನ ಬಿಮ್ಸ್‌ನಲ್ಲಿ ಬಾಣಂತಿಯೊಬ್ಬರು ಶನಿವಾರ ಬೆಳಗ್ಗೆ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷೃದಿಂದ ಸಾವಿಗೀಡಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ನಂದೀಶ್ ಎಂಬುವವರ ಪತ್ನಿ ಮಹಾದೇವಿ (21)ಮೃತ. ಜ.25 ರಂದು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಹಾದೇವಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸಿಸೇರಿಯನ್ ದಿನದಿಂದಲೂ ಆರೋಗ್ಯವಾಗಿದ್ದ ಮಹಾದೇವಿ ಕಳೆದ ಮೂರು ದಿನಗಳ ಹಿಂದೆ ಅಸ್ವಸ್ಥರಾಗಿದ್ದರು. ವಿಪರೀತ ಜ್ವರದಿಂದ ಸೋಂಕು ತಗುಲಿ ಮೃತಪಟ್ಟಿದ್ದಾರೆ ಎಂಬುದಾಗಿ ವೈದ್ಯರು ಹೇಳುತ್ತಿದ್ದಾರೆ. ಆದರೆ, ಕೆಲ ಔಷಧ ಮತ್ತು ನೆಬುಲೈಸರ್ ಅನ್ನು ಹೊರಗಿನಿಂದ ತರುವಂತೆ ಚೀಟಿ ಬರೆದು ಕೊಟ್ಟಿದ್ದರು. ಅಲ್ಲದೆ, ಹೊರಗಿನಿಂದ ತಂದಿರುವ ಔಷಧವನ್ನು ಮೃತ ಬಾಣಂತಿಗೆ ನೀಡಿಲ್ಲ. ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಶಸ್ತ್ರಚಿಕಿತ್ಸೆಗೆ ಬಳಸಿದ ಸಾಧನಗಳು ಸರಿಯಾಗಿ ಸ್ವಚ್ಛಗೊಳ್ಳದ ಕಾರಣದಿಂದಲೇ ಹೀಗೆ ಆಗಿದೆ. ಬಾಣಂತಿಗೆ ತಗುಲಿರುವ ಸೋಂಕಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿಲ್ಲ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದರು.
ಕೋಟ್.. ಥ್ರೋಂಬೋಎಂಬಾಲಿಸಂ ಎಂಬ ಸಮಸ್ಯೆಯಿಂದ ಬಾಣಂತಿ ಮೃತಪಟ್ಟಿದ್ದು. ಈ ಘಟನೆಗೆ ವೈದ್ಯರ ನಿರ್ಲಕ್ಷೃ ಕಂಡು ಬಂದರೆ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು.
- ಡಾ.ಟಿ.ಗಂಗಾಧರಗೌಡ, ನಿರ್ದೇಶಕ, ಬಿಮ್ಸ್, ಬಳ್ಳಾರಿ