ಬಳ್ಳಾರಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ.
ತಾಲೂಕಿನ ಕಕ್ಕಬೇವಿನಹಳ್ಳಿಯ ಗಂಗಮ್ಮ (20) ಮೃತರು. ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಗಂಗಮ್ಮ ಬಳಲುತ್ತಿದ್ದರು ಎಂದು ಗೊತ್ತಾಗಿದೆ.
ಮಗುವನ್ನು ರಕ್ಷಿಸಲು ಅನಿವಾರ್ಯವಾಗಿ ಶುಕ್ರವಾರ ರಾತ್ರಿ ಸಿಸೇರಿಯನ್ ನೆರವೇರಿಸಲಾಗಿತ್ತು. ಬಳಿಕ ಮುಂಜಾನೆ ಗಂಗಮ್ಮಗೆ ಕಡಿಮೆ ರಕ್ತದೊತ್ತಡದ ಸಮಸ್ಯೆ ಎದುರಾಯಿತು. ಈ ಮಧ್ಯೆ ಶ್ವಾಸಕೋಶದಲ್ಲಿ ನೀರು ತುಂಬಿ ಕೊನೆಗೆ ಅಸುನೀಗಿದರು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಬಸರೆಡ್ಡಿ ತಿಳಿಸಿದರು.