ಗೌರಸಮುದ್ರ ಮಾರಮ್ಮ ದೇಗುಲ ಕಳಸಾರೋಹಣ

VV MLK KALASA
Published on

ಮೊಳಕಾಲ್ಮೂರು: ಪಟ್ಟಣದ ಎನ್‌ಐ ಬಡಾವಣೆಯಲ್ಲಿ ಗೌರಸಮುದ್ರ ಮಾರಮ್ಮ ದೇವಾಲಯದ ಕಳಸಾರೋಹಣ ಹಾಗೂ ವಿಗ್ರಹ ಪ್ರತಿಷ್ಠಾಪನೆ ಕಾರ್ಯ ಸೋಮವಾರ ಸಕಲ ಧಾರ್ಮಿಕ ಕಾರ್ಯಗಳೊಂದಿಗೆ ನೆರವೇರಿತು.

ನೂತನ ದೇವಸ್ಥಾನ ಜಿರ್ಣೋದ್ಧಾರ ಹಿನ್ನಲೆ ಭಾನುವಾರ ಮಧ್ಯಾಹ್ನ ದೇವಸ್ಥಾನದ ಮುಂದೆ ಹಂದರ ಕಂಬ ಪೂಜೆ, ಗಣಪತಿ ಪೂಜೆ ಸ್ವಸ್ಥಿ ಪುಣ್ಯವಾಚನ, ವಿಗ್ರಹ ಶುದ್ಧಿ, ಕಳಸ ಪೂಜೆ, ನವಗ್ರಹ ಪೂಜೆ ಮಹಾ ಮಂಗಳಾರತಿ ಹಾಗೂ ಸಂಜೆ ಗಂಗಾ ಪೂಜೆ ಕಾರ್ಯಕ್ರಮ ನಡೆಯಿತು.

ಸೋಮವಾರ ಬೆಳಗ್ಗೆ ದೇವಿಯ ವಿಗ್ರಹ ಪ್ರಾಣ ಪ್ರತಿಷ್ಠಾಪನೆ, ಅಗ್ನಿ ಹೋಮ, ಗೋ ಪೂಜೆ, ಪಂಚಾಮೃತ ಅಭಿಷೇಕ, ಅಲಂಕಾರ ಹಾಗೂ ಪೂರ್ಣಾಹುತಿ ಕಾರ್ಯಕ್ರಮಗಳು ನಡೆದವು.

ನಂತರ ಅನ್ನಸಂತರ್ಪಣೆ ನಡೆಯಿತು. ಬಡಾವಣೆಯ ಭಕ್ತಾಧಿಗಳು ಹಣ್ಣು, ಹೂ ಕಾಯಿ ಅರ್ಪಿಸಿ ದೇವಿಯ ಕೃಪೆಗೆ ಪಾತ್ರರಾದರು.

ಪಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ, ಮುಖಂಡರಾದ ವಿ.ಮಾರನಾಯಕ, ಸುಬಾನ್‌ಸಾಬ್, ಕೆ.ಜಗಲೂರಯ್ಯ, ಸುದರ್ಶನರೆಡ್ಡಿ, ಮಂಜುನಾಥ, ವೆಂಕಟೇಶ್, ಶ್ರೀನಿವಾಸ ಓಬಮ್ಮ, ಮನೋಹರಸ್ವಾಮಿ, ಶಾಂತವೀರಣ್ಣ, ಸತ್ಯನಾರಯಣ, ಆನಂದ, ತಿಪ್ಪೇಸ್ವಾಮಿ, ಅಜ್ಜಣ್ಣ, ಮಹೇಶ್ ಇತರರಿದ್ದರು.

ಸಮಾಜದ ಒಳಿತಿಗಾಗಿ ದೇವರ ಆರಾಧನೆಯಲ್ಲಿ ತೊಡಗುವುದು ನಮ್ಮ ಪರಂಪರೆಯ ಪ್ರತೀಕ. ದೇವಿಯ ಅನುಕರಣೆ ಸಿಕ್ಕರೆ ನಮ್ಮೆಲ್ಲರಿಗೂ ಒಳ್ಳೆಯದಾಗಲಿದೆ. ಸಕಾಲಕ್ಕೆ ಮಳೆ, ಬೆಳೆ ಕರುಣಿಸುತ್ತಾಳೆ ಎಂಬ ನಂಬಿಕೆಯಿದೆ.ಶ್ರೀವತ್ಸ, ಅರ್ಚಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net