ಇಡೀ ಧಾರವಾಡ ಜಿಲ್ಲೆಯಲ್ಲಿ ಬರ, ಮಾಜಿ ಎಂಎಲ್ಸಿ ನಾಗರಾಜ ಛಬ್ಬಿ ಆಗ್ರಹ

Screenshot_20230914-205654_1-1.jpg
Published on

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳು ಈ ವರ್ಷ ಮಳೆ ಇಲ್ಲದೇ ಬರ ಎದುರಿಸಿವೆ. ಆದರೂ, ರಾಜ್ಯ ಸರ್ಕಾರವು ಕಲಟಗಿ ಮತ್ತು ಅಳ್ನಾವರ ತಾಲೂಕನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಆಕ್ಷೇಪಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆ ಬಾರದೇ ಸರಿಯಾಗಿ ಬಿತ್ತನೆ ಕೂಡ ಆಗಿಲ್ಲ. ಬಿತ್ತನೆ ಆದ ಕಡೆಗಳಲ್ಲಿ ಮಳೆ ಕೊರತೆಯಿಂದ ಬೆಳೆ ಬಂದಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜೋಳ, ಗೋವಿನಜೋಳ, ಕಬ್ಬು, ಬತ್ತದ ಬೆಳೆಗಳು ನೀರಿಲ್ಲದೇ ಒಣಗಿ ಹೋಗಿವೆ.

ಆದರೂ, ಸರ್ಕಾರ ಕಲಟಗಿ ಮತ್ತು ಅಳ್ನಾವರ ತಾಲೂಕನ್ನು ಬರಗಾಲ ಘೋಷಣೆ ಸಂದರ್ಭದಲ್ಲಿ ಅನ್ಯಾಯ ಮಾಡಿದೆ ಎಂದು ಹೇಳಿದ್ದಾರೆ.

ಮಳೆ ಬಾರದೇ ಆಕಾಶದತ್ತ ದೃಷ್ಟಿ ನೆಟ್ಟಿರುವ ಅನ್ನದಾತರು ದಿನನಿತ್ಯ ವರುಣನ ಕೃಪೆಗಾಗಿ ದೇವರ ಮೊರೆ ಹೋಗಿದ್ದಾರೆ. ಇಷ್ಟಾದರೂ ಮಳೆರಾಯ ಕೃಪೆ ತೋರಿಲ್ಲ. ಇದೀಗ ಸರ್ಕಾರ ಕೂಡ ರೈತರನ್ನು ಕೈಬಿಟ್ಟಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕಲಟಗಿ ಕ್ಷೇತ್ರದ ಶಾಸಕರು. ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ, ಹುಬ್ಬಳ್ಳಿ ಶಹರ ತಾಲೂಕುಗಳ ಜತೆ ಜಿಲ್ಲೆಯ ಇತರ ತಾಲೂಕುಗಳನ್ನು ಬರ ಪಟ್ಟಿಯಲ್ಲಿ ಸೇರಿಸಬೇಕು. ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕೆಂದು ನಾಗರಾಜ ಛಬ್ಬಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net