ಬಾರದ ಮಳೆ, ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರು

KISAN 2
ತಾಲೂಕಿನ ನೀಲೊಗಲ್ ಸಮೀಪದ ಸಿದ್ದರೆಡ್ಡಿ ಅವರು ಬಾಡುತ್ತಿರುವ ತಮ್ಮ ಹತ್ತಿ ಬೆಳೆಗೆ ಕೂಲಿ ಕಾರ್ಮಿಕರ ನೀರು ಹಾಕುತ್ತಿರುವ.
Published on

ಸಿರವಾರ: ಸಮಯಕ್ಕೆ ಸರಿಯಾಗಿ ಮಳೆ ಬಾರದಿದ್ದರಿಂದ ಈಗಾಗಲೇ ಬಿತ್ತನೆಗೊಂಡ ಬೆಳೆ ಉಳಿಸಿಕೊಳ್ಳಲು ತಾಲೂಕಿನ ಕೆಲ ರೈತರು ಟ್ರಾೃಕರ್ ಮೂಲಕ ನೀರುಣಿಸುತ್ತಿದ್ದಾರೆ.

ಮುಂಗಾರಿನ ಆರಂಭದಲ್ಲಿ ಬಿದ್ದ ಅಲ್ಪ ಮಳೆಗೆ ಮಳೆಯಾಶ್ರಿತ ಪ್ರದೇಶಗಳಲ್ಲಿ ರೈತರು ಹತ್ತಿ, ಮೆಣಸಿನಕಾಯಿ ಮತ್ತು ತೊಗರಿ ಬಿತ್ತನೆ ಮಾಡಿದ್ದು, ನಂತರ ಮಳೆ ಕೈಕೊಟ್ಟಿದೆ. ಇದರಿಂದ ಕಂಗಾಲಾಗಿರುವ ತಾಲೂಕಿನ ನೀಲೊಗಲ್ ಸಮೀಪದ ಸಿದ್ದರಡ್ಡಿ ಅವರು ತಮ್ಮ ಹತ್ತಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ಪ್ರತಿ ಗಿಡಕ್ಕೆ ನೀರು ಬಿಡುವ ಜತೆಗೆ ಗಿಡದಿಂದ ಗಿಡದ ಮದ್ಯದ ಕಾಲಿ ಜಾಗದಲ್ಲಿ ಪುನಃ ಬೀಜಗಳ ಬಿತ್ತನೆ ಮಾಡುತ್ತಿದ್ದಾರೆ. 12 ಎಕರೆ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿರುವ ಇವರು, ಮಳೆಯಾಗದ ಹಿನ್ನೆಲೆಯಲ್ಲಿ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

ಬಾಡಿರುವ ಹತ್ತಿ ಗಿಡಗಳಿಗೆ ನೀರು ಹಾಕುತ್ತಿದ್ದೇವೆ. ಮೂರ‌್ನಾಲ್ಕು ದಿನದಲ್ಲಿ ಮಳೆ ಬರದಿದ್ದರೆ ಎಲ್ಲ ಸಸಿಗಳಿಗೆ ನೀರು ಹಾಕಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು, ಈಗ ಮತ್ತಷ್ಟು ಹಣ ಹೂಡಿಕೆ ಮಾಡಿ ಬೆಳೆ ಉಳಿಸಿಕೊಳ್ಳಬೇಕಾಗಿದೆ.ಸಿದ್ದರೆಡ್ಡಿರೈತ, ನಿಲೋಗಲ್(ಫೋಟೋ 08 ಸಿರವಾರ 1)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net