ವಕೀಲರ ಪರಿಷತ್​ ಕಾರ್ಯಕಾರಿಣಿ ಚಿಂತನಾ ಸಭೆ

Bar Council Executive Committee brainstorming meeting
ವಿಜಯಪುರದ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್​ ಜಿಲ್ಲಾ ಟಕದ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ದಾನೇಶ ಅವಟಿ, ಜಿ.ಬಿ. ಕೋಳೂರು ಮತ್ತಿತರರಿದ್ದಾರೆ.
Published on

ವಿಜಯಪುರ:  ಮುಂಬರುವ ದಿನಗಳಲ್ಲಿ ನಡೆಯಲಿರುವ ಜಾತಿ ಜನಗಣತಿಯಲ್ಲಿ ಪಂಚಮಸಾಲಿ ಸಮಾಜದವರು ಏನು ನಮೂದಿಸಬೇಕು ಎಂಬುದರ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಜು. 13 ರಂದು ಬೆಳಗ್ಗೆ 11 ಗಂಟೆಗೆ ನಗರದ ಸಿದ್ಧೇಶ್ವರ ದೇವಸ್ಥಾನದಲ್ಲಿರುವ ನೂತನ ಶಿವಾನುಭವ ಮಂಟಪದಲ್ಲಿ ಲಿಂಗಾಯತ, ಪಂಚಮಸಾಲಿ ವಕೀಲರ ಪರಿಷತ್​ ರಾಜ್ಯಮಟ್ಟದ ಕಾರ್ಯಕಾರಿಣಿ ಚಿಂತನಾ ಸಭೆ ಹಮ್ಮಿಕೊಳ್ಳಲಾಗಿದ್ದು, ಸಮಾಜದ ಬಾಂಧವರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾತಿ ಜನಗಣತಿಗೆ ಮುಂದಾಗಿವೆ. ಆ ನಿಟ್ಟಿನಲ್ಲಿ ಸಕಲ ಸಿದ್ಧತೆ ಕೂಡ ಮಾಡಿಕೊಂಡಿವೆ. ಜನ ಗಣತಿಗೆ ಸರ್ಕಾರಿ ಸಿಬ್ಬಂದಿ ಮನೆ ಬಾಗಿಲಿಗೆ ಬಂದಾಗ ನಿಖರ ಮಾಹಿತಿ ನೀಡುವ ಮೂಲಕ ಪಂಚಮಸಾಲಿ ಸಾಮಾಜ ಬಾಂಧವರು ಸ್ಪಷ್ಟ ಸಂದೇಶ ಕೊಡಬೇಕಿದೆ.

ಈ ಕುರಿತು ಕಾನೂನು ತರ ಅಭಿಪ್ರಾಯ ಪಡೆದು ಮಕ್ಕಳ ಶಿಣ, ಉದ್ಯೋಗ ಪಡೆಯುವಾಗ ಮೀಸಲಾತಿಗೆ ಅನುಕೂಲವಾಗುವ ಸಾಮಾಜಿಕ ಕಾನೂನಾತ್ಮಕವಾಗಿ ಅನ್ವಯವಾಗುವ ಹಾಗೇ ತೀರ್ಮಾನಕ್ಕೆ ಬರಬೇಕಾದ ಅವಶ್ಯವಿದೆ ಎಂದು ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಅವರು ಮಾತನಾಡಿದರು.

ಈ ಹಿಂದೆ ಬೆಳಗಾವಿ, ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ನಡೆದ ವಕೀಲರ ಪರಿಷತ್​ನ ಸಭೆಗಳು ಯಶಸ್ವಿಯಾಗಿವೆ. ಸದ್ಯ ಐತಿಹಾಸಿಕ ವಿಜಯಪುರದಲ್ಲಿ ಮೊದಲ ಬಾರಿಗೆ ನಡೆಯುವ ರಾಜ್ಯ ಕಾರ್ಯಕಾರಿಣಿ ಚಿಂತನಾ ಸಭೆಗೆ ಸಮಾಜದ ವಕೀಲ ಪರಿಷತ್​ ಪದಾಧಿಕಾರಿಗಳು, ಕಾನೂನು ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಲಹೆ ಸೂಚನೆ ನೀಡುವ ಮೂಲಕ ಸಮಾಜದ ಸ್ಪಷ್ಟ ಸಂದೇಶ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಪಂಚಮಸಾಲಿ ವಕೀಲರ ಪರಿಷತ್​ನ ಪದಾಧಿಕಾರಿ ಜಿ.ಬಿ. ಕೋಳೂರು ಮಾತನಾಡಿ, ಪಂಚಮಸಾಲಿ ಸಮಾಜದ 2ಎ ಮೀಸಲಾತಿಗೆ ಬೆಳಗಾವಿಯಲ್ಲಿ ನಡೆದ ಹೋರಾಟದಲ್ಲಿ ರಾಜ್ಯ ಸರ್ಕಾರ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಮಾಯಕರ ಮೇಲೆ ಲಾಠಿ ಪ್ರಹಾರ ನಡೆಸುವ ದೌರ್ಜನ್ಯವೆಸೆಗಿದೆ. ಅದನ್ನು ಸಮಾಜದ ಬಾಂಧವರು ಮರೆಯುವ ಮಾತೇ ಇಲ್ಲ.

ಆ ನೋವು ಮಾಯವಾಗ ಬೇಕಾದರೆ ಸರ್ಕಾರ ಕೂಡಲೇ ನಮ್ಮ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದ ಅವರು, ಸಮಾಜದವರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ನಾವು ಮಾಡಿದ ಮನವಿಗೆ ಇತ್ತೀಚೆಗೆ ಹೈಕೋರ್ಟ್​ ಕೂಡ ಪುರಸ್ಕರಿಸಿದೆ. ಅದರಿಂದ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ ಎಂದರು.

ಕಿತ್ತೂರು ಕರ್ನಾಟಕ ರಾಜ್ಯ ಸಂಚಾಲಕ ಶರಬಸಪ್ಪ ಗಂಗಶೆಟ್ಟಿ, ಪಂಚ ಸೇನೆ ಜಿಲ್ಲಾ ಅಧ್ಯ ಸಂತೋಷ ಮುಂಜಣ್ಣಿ, ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ, ಶ್ರೀಶೈಲ ಬುಕ್ಕಾಣಿ, ಸಿದ್ದು ಹಳ್ಳೂರ, ಬಿ.ಡಿ. ಬಿರಾದಾರ (ಕುಮಟಗಿ), ಮಾಧ್ಯಮ ವಕ್ತಾರ ದಾನೇಶ ಅವಟಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net