

ರಾಣೆಬೆನ್ನೂರ: ಬಾರ್ ಆ್ಯಂಡ್ ರೆಸ್ಟೋರೆಂಟ್ನ ಸೆಟ್ರಸ್ ಮುರಿದು ಒಳಗೆ ನುಗ್ಗಿದ ಖದೀಮರು 1.38 ಲಕ್ಷ ರೂ. ನಗದು ದೋಚಿದ ಘಟನೆ ತಾಲೂಕಿನ ಕಾಕೋಳ ತಾಂಡಾ ಬಳಿಯಿರುವ ಲೋಟಸ್ ಬಾರ್ನಲ್ಲಿ ಬುಧವಾರ ರಾತ್ರಿ ನಡೆದಿದೆ.
ಮಲ್ಲೇಶಪ್ಪ ಕಲಾಲ್ ಎಂಬುವರಿಗೆ ಸೇರಿದ ಬಾರ್ನಲ್ಲಿ ಕಳ್ಳತನ ಆಗಿರುವುದು.
ಯಾರೋ ಕಳ್ಳರು ಬಾರ್ ಸೆಟ್ರೆಸ್ನ ಬೀಗ ಮುರಿದು ಒಳಗೆ ನುಗ್ಗಿ ಮದ್ಯ ಮಾರಾಟ ಮಾಡಿ ಸಂಗ್ರಹಿಸಿಟ್ಟ 1.38 ಲಕ್ಷ ರೂ.ಅನ್ನು ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.