ನವಭಾರತದ ನಿರ್ಮಾತೃ ಬಾಪೂಜಿ

26 GVT 06
ಗಂಗಾವತಿ ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಗಾಂಧಿ ಭಾರತ ವಿಶೇಷ ಕಾರ್ಯಕ್ರಮವನ್ನು ಪ್ರಾಚಾರ್ಯೆ ಡಾ.ಕೆ.ಎಸ್.ಶೋಭಾ ಶುಕ್ರವಾರ ಉದ್ಘಾಟಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಸುಂಕೇಶ್ವರ ಕರಿಗೂಳಿ, ಸಹಾಯಕ ಪ್ರಾಧ್ಯಾಪಕ ಕೆ.ತಾತಪ್ಪ ಇತರರಿದ್ದರು.
Published on

ಗಂಗಾವತಿ: ಗಾಂಧೀಜಿ ಪ್ರತಿಯೊಂದು ಚಿಂತನೆಗಳು ದಾರಿದೀಪವಾಗಿದ್ದು, ಅಹಿಂಸಾ ತತ್ವ ಜಾಗತಿಕವಾಗಿ ಅವಶ್ಯವಾಗಿದೆ ಎಂದು ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಸುಂಕೇಶ್ವರ ಕರಿಗೂಳಿ ಹೇಳಿದರು.

ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಗಾಂಧಿ ಭಾರತ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸತ್ಯಾಗ್ರಹ ಎಂಬ ಹೋರಾಟದಿಂದ ದಮನಿತರಿಗೆ ನ್ಯಾಯ ಸಿಕ್ಕಿದೆ. ಹೋರಾಟ, ಸರಳತೆ, ಸತ್ಯ, ಶಾಂತಿ, ಅಹಿಂಸೆಗಳ ಮೂಲಕ ದೇಶವನ್ನು ಸ್ವಾತಂತ್ರ್ಯಗೊಳಿಸಿದ್ದು, ನವಭಾರತದ ನಿರ್ಮಾಣಕ್ಕೆ ಮಹಾತ್ಮಾಗಾಂಧೀ ವೇದಿಕೆ ಕೊಟ್ಟರು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ.ಕೆ.ಎಸ್.ಶೋಭಾ ಮಾತನಾಡಿ, ನೈತಿಕ ಹಾಗೂ ಪ್ರಾಮಾಣಿಕದಿಂದ ಸತ್ಯದ ಸೌಂದರ್ಯವನ್ನು ಉನ್ನತಿಕರಿಸಿದ್ದು ಮಹಾತ್ಮ ಗಾಂಧೀಜಿ ಎಂದರು.

ಸಹಾಯಕ ಪ್ರಾಧ್ಯಾಪಕ ಕೆ.ತಾತಪ್ಪ ಮಾತನಾಡಿದರು. ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ದೇಶಭಕ್ತಿ ಗೀತೆ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರನ್ನು ಘೋಷಣೆ ಮಾಡಿ ಇಲಾಖೆಗೆ ರವಾನಿಸಲಾಯಿತು.

ಪ್ರಾಧ್ಯಾಪಕರಾದ ಶಂಕ್ರಪ್ಪ, ಶಶಿಕುಮಾರ, ಡಾ.ಸರ್ರಾಜ್ ಅಹ್ಮದ್, ವೆಂಕಟರಾಜು, ಸಂಧ್ಯಾ, ಪರಶುರಾಂ,ಈಶಪ್ಪ ಮೇಟಿ, ದೇವರಾಜ್, ವಿರೂಪಾಕ್ಷಪ್ಪ, ರವಿಕುಮಾರ್, ಜಬೀನಾ ಬೇಗಂ, ವಿನಾಯಕ , ಶಾಂತಮ್ಮ, ದುರ್ಗಾ ಕಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net