ಭರಮಸಾಗರದಲ್ಲಿ ರಾಷ್ಟ್ರೀಯ ಕ್ರೀಡಾ ದಿನ

dj brm school
Published on

ಭರಮಸಾಗರ: ಇಲ್ಲಿನ ಬಾಪೂಜಿ ಪ್ರೌಢಶಾಲೆಯಲ್ಲಿ ಬುಧವಾರ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹೋಬಳಿ ಮಟ್ಟದ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ಭಾರತದ ತಾರಾ ಕ್ರೀಡಾಪಟುಗಳಾದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಜಾವೆಲಿನ್ ಪಟು ನೀರಜ್ ಚೋಪ್ರಾ, ಕ್ರಿಕೆಟಿಗ ಸಚಿನ್ ತೆಂಡೊಲ್ಕರ್,

ಓಟಗಾರ್ತಿ ಪಿ.ಟಿ.ಉಷಾ ಅವರ ಸಾಧನೆ ಬಗ್ಗೆ ಮುಖ್ಯ ಶಿಕ್ಷಕ ಗೊಂಚಿಗಾರ್ ಪರಿಚಯಿಸಿದರು.

ಕ್ರೀಡಾ ಪ್ರಶಸ್ತಿ ಅರ್ಜುನ, ಏಕಲವ್ಯ, ದೋಣಾಚಾರ್ಯ ಮುಂತಾದ ಕ್ರೀಡಾ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net