

ಮೂಲ್ಕಿ: ಒಂಬತ್ತು ಮಾಗಣೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವದ ಅಂಗವಾಗಿ ದೇವರ ಹಗಲು ರಥೋತ್ಸವ ವಿಜೃಂಭಣೆಯಿಂದ ಗುರುವಾರ ನಡೆಯಿತು.
ಧಾರ್ಮಿಕ ಕಾರ್ಯಕ್ರಮ ಕ್ಷೇತ್ರದ ತಂತ್ರಿ ಶಿಬರೂರು ಗೋಪಾಲಕೃಷ್ಣ ತಂತ್ರಿ ಪ್ರಧಾನ ಪೌರೋಹಿತ್ಯದಲ್ಲಿ, ಅತ್ತೂರು ರಾಘವೇಂದ್ರ ಉಡುಪ, ಅರ್ಚಕ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ಅವರಿಂದ ವಿಶೇಷ ಪ್ರಾರ್ಥನೆ, ಬಲಿ ಉತ್ಸವ ಆರಂಭ, ದೇವರ ಹಗಲು ರಥೋತ್ಸವ, ಪಲ್ಲಪೂಜೆ ಬಳಿಕ ಮಧ್ಯಾಹ್ನ ಮಹಾಅನ್ನಸಂತರ್ಪಣೆ ನೆರವೇರಿತು.
ಕ್ಷೇತ್ರದ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಶ್ರೀ ವೆಂಕಟರಮಣ ದೇವಸ್ಥಾನ ಮೊಕ್ತೇಸರ ಅತುಲ್ ಕುಡ್ವ, ಸತೀಶ್ ಭಂಡಾರಿ, ಕಿಶೋರ್ ಸಾಲ್ಯಾನ್ ಬಿರುವೆರ್ ಕುಡ್ಲ, ಗೋಪಾಲಕೃಷ್ಣ ಭಟ್, ಶ್ರೀನಾಥ್ ಭಟ್ ಹೆಜ್ಮಾಡಿ, ಮಾಜಿ ಸಚಿವ ಅಭಯಚಂದ್ರ ಜೈನ್, ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಜೀರ್ಣೋದ್ಧಾರ ಸಮಿತಿಯ ಶೇಖರ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ರಾಮಚಂದ್ರ ನಾಯಕ್ ಕೋಲ್ನಾಡು ಗುತ್ತು, ಸುನೀಲ್ ಆಳ್ವ, ವೆಂಕಟೇಶ ಹೆಬ್ಬಾರ್, ಚಂದ್ರಹಾಸ ಶೆಟ್ಟಿ ಶಿಮಂತೂರು, ಮಹಿಮ್ ಹೆಗ್ಡೆ, ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯ ಸುಭಾಷ್ ಶೆಟ್ಟಿ, ಮಾಜಿ ಸದಸ್ಯ ಪುರುಷೋತ್ತಮ ಬಡಗುಹಿತ್ಲು, ಕಮಲಾಕ್ಷ ಬಡಗುಹಿತ್ಲು, ಉದಯ ಕುಮಾರ್ ಶೆಟ್ಟಿ ಅಧಿದನ್, ಗಂಗಾಧರ ಶೆಟ್ಟಿ, ಬರ್ಕೆ ತೋಟ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಕಿಶೋರ್ ಶೆಟ್ಟಿ ಬಪ್ಪನಾಡು, ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ನಾಗೇಶ್ ಬಪ್ಪನಾಡು, ಗೌತಮ್ ಜೈನ್ ಮೂಲ್ಕಿ ಅರಮನೆ, ಶಿವಶಂಕರ್ ವರ್ಮ ಮತ್ತಿತರರು ಉಪಸ್ಥಿತರಿದ್ದರು.