30ರಂದು ಬಪ್ಪನಾಡು ಲಕ್ಷದೀಪ ಬಲಿ ಉತ್ಸವ

Mul_Bappanadu
Published on

ಮೂಲ್ಕಿ: ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನ.30ರಂದು ಲಕ್ಷದೀಪ ಬಲಿ ಉತ್ಸವ ನಡೆಯಲಿದ್ದು, ಪೂರ್ವಭಾವಿಯಾಗಿ ಆಮಂತ್ರಣ ಬಿಡುಗಡೆ ಸಮಾರಂಭ ನಡೆಯಿತು.

ಅರ್ಚಕ ಪ್ರಸಾದ್ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಸಚಿವ ಅಭಯ ಚಂದ್ರ ಜೈನ್ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.

ಸೀಮೆಯ ಅರಸ ಹಾಗೂ ಕ್ಷೇತ್ರದ ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಅಕೌಂಟೆಂಟ್ ಶಿವಶಂಕರ್, ಲಕ್ಷದೀಪೋತ್ಸವ ಸಮಿತಿ ಪದಾಧಿಕಾರಿಗಳಾದ ಸುನೀಲ್ ಆಳ್ವ, ಮಹೀಮ್ ಹೆಗ್ಡೆ, ಕೃಷ್ಣರಾಜ ಬಪ್ಪನಾಡು, ಪುರುಷೋತ್ತಮ ರಾವ್ ಬಡಗುಹಿತ್ಲು, ಚಿರಾಗ್ ಬಪ್ಪನಾಡು, ಗಿರೀಶ್ ಮೆಂಡನ್ ಉಪಸ್ಥಿತರಿದ್ದರು.

ಲಕ್ಷದೀಪೋತ್ಸವ ಅಂಗವಾಗಿ ಕ್ಷೇತ್ರದಲ್ಲಿ ಬೆಳಗ್ಗೆ ಲಕ್ಷ ಕುಂಕುಮಾರ್ಚನೆ, ಸಂಜೆ 4ಕ್ಕೆ ಸಾರ್ವಜನಿಕ ಶನಿಪೂಜೆ, ರಾತ್ರಿ 8ಕ್ಕೆ ಲಕ್ಷದೀಪ ಬಲಿ ಉತ್ಸವ, ಅಷ್ಟಾವಧಾನ ಸೇವೆ ನಡೆಯಲಿದ್ದು, ಭಕ್ತರಿಗೆ ಫಲಹಾರ ವ್ಯವಸ್ಥೆ ಇದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net