ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಮತ್ತು ಕೃಷ್ಣ ವೇಷಧಾರಿಗಳ ಶೋಭಾಯಾತ್ರೆ

bappalige janmastami
Published on

ಪುತ್ತೂರು: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಸಿಂಗಾಣಿ ಹಾಗೂ ಎಂಸಿಬಿ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ ಬಪ್ಪಳಿಗೆ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಮತ್ತು ಕೃಷ್ಣ ವೇಷಧಾರಿಗಳ ಶೋಭಾಯಾತ್ರೆ ಬಪ್ಪಳಿಗೆ ಸಿಂಗಾಣಿಯಲ್ಲಿ ನಡೆಯಿತು.

ಕೃಷ್ಣ ವೇಷಧಾರಿ ಮಕ್ಕಳ ಭವ್ಯ ಶೋಭಾಯತ್ರೆಗೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ ಚಾಲನೆ ನೀಡಿದರು. ರಾಗಿಕುಮೇರಿ ಶಾಲಾ ಬಳಿಯಿಂದ ಸಿಂಗಾಣಿವರೆಗೂ ಚೆಂಡೆ, ವಾದ್ಯ, ಬ್ಯಾಂಡ್ ಸೆಟ್ ಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಸಿಂಗಾಣಿಯ ಹಿಲ್ ಗ್ರೌಂಡ್ ನಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ ಕೃಷ್ಣನ ಪೂಜಿಸುವಂತ ಕಾರ್ಯಕ್ರಮ ಎಲ್ಲೆಡೆ ನಡೆಯಬೇಕು. ದೇವರ ಪೂಜಾ ಕೈಂಕರ್ಯಗಳನ್ನು ಹಿಂದೂ ಸಮಾಜ ಒಗ್ಗಟ್ಟಾಗಿ ಮಾಡಬೇಕು. ಧರ್ಮವನ್ನು ದೂಷಿಸುವ ಕಾರ್ಯವಾಗುತ್ತಿದ್ದು, ಇದನ್ನು ಪ್ರಶ್ನಿಸುವ ಜವಾಬ್ದಾರಿ ಹಿಂದೂ ಸಮಾಜಕ್ಕಿದೆ ಎಂದರು.

ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಹಿಂದೂ ಸಮಾಜದ ಏಳಿಗೆಗೆ ನಾನೆಂದು ಸಿದ್ಧ. ಹಿಂದೂ ಸಮಾಜವನ್ನು ಭದ್ರವಾಗಿ ಕಾಪಾಡುವುದು ನಮ್ಮೆಲ್ಲರ ಹೊಣೆ. ಧರ್ಮವನ್ನು ಉಳಿಸುವ ಜೊತೆಗೆ ಬೆಳೆಸುವ ಕೆಲಸ ಆಗಬೇಕು ಎಂದು ಹೇಳಿದರು.

ಚಿತ್ರನಟ, ಹಾಸ್ಯಕಲಾವಿದ ರವಿ ರಾಮಕುಂಜ, ನಿವೃತ್ತ ಶಿಕ್ಷಕಿ ಕಮಲಾಕ್ಷಿ ಟೀಚರ್, ಮೋಕ್ಷಧಾಮ ಮೇಲ್ವಿಚಾರಕ ಸತೀಶ್, ನಿವೃತ್ತ ಪೊಲೀಸ್ ಅಧಿಕಾರಿ ರಾಮ್ ನಾಯ್ಕ ಮತ್ತು ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ್ತಿ ವಿನುಶ್ರೀ ಗೌಡ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ನೀಡಲಾಯಿತು.

’ಪುಳಿಮುಂಚಿ’ ಚಿತ್ರತಂಡದ ನಿರ್ದೇಶಕ ತ್ರಿಶೂಲ್ ಶೆಟ್ಟಿ, ಚಿತ್ರನಟಿ ಸಮತಾ ಅಮೀನ್, ಬಾಲ ನಟಿ ಅದ್ವಿಕಾ ಶೆಟ್ಟಿ, ನಟ ಕಾಂತಾರ ಖ್ಯಾತಿಯ ಪುಷ್ಪರಾಜ್, ಹಾಸ್ಯ ಕಲಾವಿದ ರವಿ ರಾಮಕುಂಜ, ನಟ ಅಶೋಕ್ ಬೇಕೂರು, ವೈದ್ಯ ರವಿ ನಾರಾಯಣ ಭಟ್, ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net