ಮತ್ತೆ ಚಿಗುರಿದ ಧರೆಗುರುಳಿದ್ದ ಆಲದ ಮರ

TREE...
Published on

ಸಿಂಧನೂರು: ನಗರದ ಏಳುರಾಗಿಕ್ಯಾಂಪ್‌ನ ಜಮೀನೊಂದರಲ್ಲಿ ಬುಡ ಸಮೇತ ಕಿತ್ತುಹಾಕಲಾಗಿದ್ದ ಸುಮಾರು 30 ವರ್ಷದ ಆಲದ ಮರ ಮತ್ತೆ ಚಿಗುರೊಡೆದಿದೆ. ಸುಮಾರು 25 ಮೀಟರ್ ಎತ್ತರ, 14 ಮೀಟರ್ ಅಗಲವಾಗಿದ್ದ ಈ ಮರವನ್ನು ವನಸಿರಿ ತಂಡದವರು ಜೆಸಿಬಿ ಹಾಗೂ ಟ್ರ್ಯಾಕ್ಟರ್ ಮೂಲಕ ನಗರದ ನೀರಾವರಿ ಇಲಾಖೆಯ ಜಾಗಕ್ಕೆ ಸ್ಥಳಾಂತರಿಸಿದ್ದರು.

ಬೇರುಗಳು ಕೊಳೆತದ್ದರಿಂದ ಆಲದ ಮರವನ್ನು ಕಿತ್ತು ಹಾಕಲಾಗಿತ್ತು. ವನಸಿರಿ ತಂಡದವರು ಬೇರುಗಳನ್ನು ಸ್ವಚ್ಛ ಮಾಡಿ ರಾಸಾಯನಿಕ ಸಿಂಪಡಿಸಿದ್ದರು. ಬಳಿಕ ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನ ನೀರಾವರಿ ಇಲಾಖೆಯ ಜಾಗದಲ್ಲಿ ಮರವನ್ನು ಮತ್ತೆ ನೆಡಲಾಗಿತ್ತು. ಈ ಸಂದರ್ಭದಲ್ಲಿ ಮರದ ಟೊಂಗೆಗಳನ್ನು ಕತ್ತರಿಸಿ, ಸಗಣಿ ಸಿಂಪಡಿಸಲಾಗಿತ್ತು. 30 ಕೆಜಿ ಉಪ್ಪು, 30 ಕೆಜಿ ಬೆಲ್ಲ, ಒಂದು ಕೆಜಿ ಜೇನುತುಪ್ಪವನ್ನು ಗಿಡದ ಬುಡಕ್ಕೆ ಹಾಕಲಾಗಿತ್ತು.

ಮತ್ತೆ ನೆಡಲಾದ ಮರ ಒಂದು ವರ್ಷದಲ್ಲಿ ಚಿಗರೊಡೆದು ಸಮೃದ್ಧವಾಗಿ ಬೆಳೆದಿದೆ. ಮರಕ್ಕೆ ಅಮರಶ್ರೀ ಎಂದು ನಾಮಕರಣ ಮಾಡಿ ಇತ್ತೀಚೆಗೆ ವಾರ್ಷಿಕೋತ್ಸವ ಆಚರಿಸಲಾಗಿತ್ತು. ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹಾಗೂ ಹಲವು ಗಣ್ಯರು ಭೇಟಿ ನೀಡಿ ಆಲದ ಮರ ವೀಕ್ಷಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net