ಬಾನುಲಿ ಕೇಂದ್ರಗಳ ಪಾತ್ರ ಪ್ರಮುಖ

web3
ಗೋಕಾಕನಲ್ಲಿ ಆರಂಭಿಸಿದ ವಾಯ್ಸ ಆಫ್ ಗೋಕಾಕ 89.6 ಬಾನುಲಿ ಕೇಂದ್ರವನ್ನು ಸಂಸದರಾದ ಜಗದೀಶ ಶೆಟ್ಟರ್, ಪ್ರಿಯಾಂಕಾ ಜಾರಕಿಹೊಳಿ ಉದ್ಘಾಟಿಸಿದರು. ವಿಶ್ವನಾಥ ಕಡಕೋಳ, ಯು.ಬಿ.ಆಜರೆ ಇತರರಿದ್ದರು.
Published on

ಗೋಕಾಕ: ಗ್ರಾಮೀಣ ಜನರ ಕಲೆ, ಕೃಷಿ, ಸಾಂಸ್ಕೃತಿಕ ಚಟುವಟಿಕೆ, ಸಂಸ್ಕೃತಿ ಬಿಂಬಿಸುವಲ್ಲಿ ಬಾನುಲಿ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ನಗರದ ಗೋಕಾಕ ಶಿಕ್ಷಣ ಸಂಸ್ಥೆಯ 60ನೇ ವರ್ಷದ ಸವಿನೆನಪಿನಲ್ಲಿ ಹೊಸದಾಗಿ ಪ್ರಾರಂಭಿಸಿದ ನೂತನ ವಾಯ್ಸ ಆಫ್ ಗೋಕಾಕ 89.6 ಸಮುದಾಯ ಬಾನುಲಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ವಾಯ್ಸ ಆಫ್ ಗೋಕಾಕ ಕೇಂದ್ರ ಜನರ ಆಶೋತ್ತರಗಳಿಗೆ ಸ್ಪಂದಿಸಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಡಿಜಿಟಲ್ ಯುಗದಲ್ಲಿ ಜನರು ಮೊಬೈಲ್‌ನಲ್ಲಿ ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಅವರಿಗೆ ಸೂಕ್ತ ಮಾಹಿತಿ ನೀಡುವ ಕಾರ್ಯವನ್ನು ಕೇಂದ್ರ ಮಾಡಲಿ ಎಂದರು.

ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ ಕಡಕೋಳ ಅಧ್ಯಕ್ಷತೆ ವಹಿಸಿದ್ದರು. ವಿಶ್ವಸ್ಥ ಮಂಡಳಿ ಅಧ್ಯಕ್ಷ ಯು.ಬಿ.ಆಜರೆ, ಕಾರ್ಯದರ್ಶಿ ಆರ್.ಎಂ.ವಾಲಿ, ನಿವೃತ್ತ ಸೇನಾಧಿಕಾರಿ ಬ್ರಿಗೇಡಿರ್ ಬಿ.ಎಂ ಪೂರ್ವಿಮಠ, ನಿರ್ದೇಶಕರಾದ ಅಜಯ ಜಾಧವ, ನೀಲಕಂಠ ಪಟ್ಟಣಶೆಟ್ಟಿ, ಪ್ರಕಾಶ ಕೋಲಾರ, ಶಶಿಲ ಮುನವಳ್ಳಿ ಡಾ.ವೀರಭದ್ರಪ್ಪ ಉಪ್ಪಿನ, ಮಹಾಂತೇಶ ತಾವಂಶಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net