ಬಂಟ್ವಾಳದಲ್ಲಿ ಮಳೆಗೆ ಅಪಾರ ಹಾನಿ

Bantwal rain damage
Published on

ಬಂಟ್ವಾಳ: ಸೋಮವಾರ ಸುರಿದ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ತಾಲೂಕಿನ ಶಂಭೂರು ಗ್ರಾಮದ ರಾಧಾ ಅವರ ವಾಸ್ತವ್ಯದ ಮನೆಗೆ ಹಾನಿಯಾಗಿದೆ. ಪಂಜಿಕಲ್ಲು ಗ್ರಾಮದ ಪಾಂಗಳ ಎಂಬಲ್ಲಿ ಅಣ್ಣು ಸಾಲ್ಯಾನ್ ಎಂಬುವರ ತೋಟದಲ್ಲಿ ಫಲ ಬರುವ 20 ಅಡಕೆ ಮರಗಳು ಉರುಳಿ ಬಿದ್ದಿವೆ.

ಅಮ್ಟಾಡಿ ಗ್ರಾಮದ ಲೋಕನಾಥ ಅವರ ಮನೆಗೆ ತಾಗಿಕೊಂಡಿರುವ ಹಟ್ಟಿ ಮೇಲೆ ಮರ ಬಿದ್ದು ಹಾನಿಯಾಗಿದೆ. ಮಂಚಿ ಗ್ರಾಮದ ಕದಂಗಡಿ ಎಂಬಲ್ಲಿ ಭಾಗಿರಥಿ ಪೂಜಾರಿ ಅವರ ಮನೆಯ ಹಿಂಭಾಗದ ಗೋಡೆ ಕುಸಿದು ಬಿದ್ದಿದೆ.

ಪುರಸಭಾ ವ್ಯಾಪ್ತಿಯ ಬಿ.ಕಸ್ಬಾ ಗ್ರಾಮದ ಅಗ್ರಾರ್ ಇಜ್ಜಾ ಎಂಬಲ್ಲಿ ದುಗ್ಗಮ್ಮ ಎಂಬುವರ ಮನೆ ಮೇಲೆ ಗುಡ್ಡ ಕುಸಿದು ಭಾಗಶಃ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net