ಕಲಾ ರಸಿಕರ ಹೃದಯಗೆದ್ದ ಹಾಸ್ಯ ಸಾಮ್ರಾಟ ಜಯರಾಮ ಆಚಾರ್ಯ

jjjjjjjjjjj
Published on



ಮಂಗಳೂರು : ಯಾವುದೇ ಕಸರತ್ತುಗಳಿಲ್ಲದ ಶುದ್ಧವಾದ ಹಾಸ್ಯದಿಂದ ಯಕ್ಷಪ್ರೇಮಿಗಳ ಹೃದಯ ಗೆದ್ದ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯರು ಎಂದು ಪ್ರಸಿದ್ಧ ಯಕ್ಷಗಾನ ಕಲಾವಿದ ಎಂ. ಕೆ. ರಮೇಶ ಆಚಾರ್ಯ ಹೇಳಿದರು.
ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್, ಮಂಗಳೂರು ವಿಶ್ವಬ್ರಾಹ್ಮಣ ಸಮಾಜದ ಇತರ ಸಂಘಟನೆಗಳ ಸಹಯೋಗದೊಂದಿಗೆ ಪಟ್ಟೆ ಲಿಂಗಪ್ಪ ಆಚಾರ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಂಟ್ವಾಳ ಜಯರಾಮ ಆಚಾರ್ಯರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಯಕ್ಷಾಂಗಣದ ಅಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ಯಕ್ಷಗಾನದ ಪರಂಪರೆಯ ಹಾಸ್ಯದ ಅನರ್ಘ್ಯ ರತ್ನವನ್ನು ಕಳೆದುಕೊಂಡಿದ್ದೇವೆ ಎಂದರು. ವಿಶ್ವಕರ್ಮ ಕಲಾ ಪರಿಷತ್ತಿನ ಅಧ್ಯಕ್ಷ ಡಾ. ಎಸ್. ಪಿ. ಗುರುದಾಸ್ ಮಾತನಾಡಿ ಬಂಟ್ವಾಳ ಜಯರಾಮ ಆಚಾರ್ಯರ ವ್ಯಕ್ತಿತ್ವ ಹಾಗೂ ಸಾಧನೆ ಯುವ ಕಲಾವಿದರಿಗೆಲ್ಲಾ ಪ್ರೇರಣದಾಯಿ ಎಂದರು.
ಕಡಬ ಸಂಸ್ಮರಣಾ ವೇದಿಕೆಯ ಗೌರವಾಧ್ಯಕ್ಷ ಜಿ. ಟಿ. ಆಚಾರ್ಯ, ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ. ಎಸ್. ಆರ್. ಹರೀಶ ಆಚಾರ್ಯ, ಕಾಳಿಕಾಂಬಾ ವಿನಾಯಕ ದೇವಸ್ಥಾನದ ಮಾಜಿ ಮೊಜ್ತೇಸರರಾದ ಜಿ. ಸುಂದರ ಆಚಾರ್ಯ ಬೆಳುವಾಯಿ, ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ ಸಿದ್ಧಕಟ್ಟೆ, ದ. ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ. ಎಲ್. ಹರೀಶ್, ಎಸ್. ಕೆ. ಗೋಲ್ಡ್ ಸ್ಮಿತ್ಸ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ವಿ. ಜೆ. ಆಚಾರ್ಯ, ಮುಂಬೈ ವಿಶ್ವಕರ್ಮ ಅಸೋಸಿಯೇಷನ್ ನ ಉಪಾಧ್ಯಕ್ಷ ಗಣೇಶ್ ಕುಮಾರ್, ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ಮಾಜಿ ಅಧ್ಯಕ್ಷ ಪಿ. ಆರ್. ಗೋಪಾಲಕೃಷ್ಣ, ಲೇಖಕ ಪಶುಪತಿ ಉಳ್ಳಾಲ ಶ್ರದ್ಧಾಂಜಲಿ ಅರ್ಪಿಸಿದರು. ವಿಶ್ವಕರ್ಮ ಕಲಾ ಪರಿಷತ್ ವತಿಯಿಂದ ಜಯರಾಮ ಆಚಾರ್ಯರ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಲು ನಿರ್ಧರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net