ಬೈಕ್ ಅಪಘಾತದಲ್ಲಿ ಬಾಣಸಿಗ ಮೃತ್ಯು

cook
Published on

ಬಂಟ್ವಾಳ: ತಾಲೂಕಿನ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಸಾಯಂಕಾಲ ಸಂಭವಿಸಿದ ಅಪಘಾತದಲ್ಲಿ ಬೈಕ್ ಸ್ಕಿಡ್ ಆಗಿ ವಿಟ್ಲದ ಜನಪ್ರಿಯ ಬಾಣಸಿಗ ಕಾಂತಡ್ಕ ಶಂಕರನಾರಾಯಣ ಭಟ್ (58) ಮೃತಪಟ್ಟಿದ್ದಾರೆ.

ಮಂಗಳೂರು ಕಡೆಯಿಂದ ಬೈಕ್‌ನಲ್ಲಿ ವಿಟ್ಲ ಕಡೆಗೆ ಆಗಮಿಸುತ್ತಿದ್ದ ಅವರ ಬೈಕ್ ಫರಂಗಿಪೇಟೆ ಮೀನು ಮಾರುಕಟ್ಟೆ ಬಳಿ ಪಲ್ಟಿಯಾಗಿ ಅಪಘಾತ ಸಂಭವಿಸಿದ್ದಾಗಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತರಾದರು. ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ವಿಟ್ಲ ಪರಿಸರದ ಪ್ರಖ್ಯಾತ ಬಾಣಸಿಗರಾಗಿದ್ದ ಅವರು, ಹಲವಾರು ದೇವಸ್ಥಾನಗಳ ದೊಡ್ಡ ಪ್ರಮಾಣದ ಅಡುಗೆ ಮಾಡುವುದರಲ್ಲಿ ನಿಷ್ಣಾತರಾಗಿದ್ದರು. ವಿಟ್ಲ ಸಮೀಪ ನೆತ್ತರಕೆರೆ ಎಂಬಲ್ಲಿನ ಪಾಂಚಜನ್ಯ ಲೇಔಟ್‌ನಲ್ಲಿ ವಾಸವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net