ಕಾರೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗಂಭೀರವಾಗಿ

1
Published on

ಬಂಟ್ವಾಳ: ಕಾರೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿಸಿರೋಡಿನಲ್ಲಿ ನಡೆದಿದೆ.


ಅಟೋ ಚಾಲಕ ಮಹಮ್ಮದ್ ಸಾದಿಕ್ ಎಂಬಾತನಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗೂಡಿನ ಬಳಿಯಲ್ಲಿರುವ ಆರೋಗ್ಯ ಕೇಂದ್ರಕ್ಕೆ ಸುರಕ್ಷಾ ಅಧಿಕಾರಿಯೋರರ್ವರನ್ನು ರಿಕ್ಷಾದಲ್ಲಿ ಮಹಮ್ಮದ್ ಸಾದಿಕ್ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪಾಣೆಮಂಗಳೂರು ಕಡೆಯಿಂದ ಬರುವ ಕಾರೊಂದು ರೈಲು ನಿಲ್ದಾಣದ ಸಮೀಪವಿರುವ ಲಯನ್ಸ್ ಸೇವಾ ಮಂದಿರದ ಪಾರ್ಕ್ ನ ಮುಂಭಾಗದಲ್ಲಿ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದೆ.ರಿಕ್ಷಾ ಚಾಲಕನಿಗೆ ಗಂಭೀರವಾಗಿ ಗಾಯವಾದರೆ ಪ್ರಯಾಣಿಕೆ ಅಮಿತಾ ಅವರು ಅಲ್ಪಸ್ವಲ್ಪ ಪ್ರಮಾಣದ ಗಾಯಗಳಿಂದ ಪಾರಾಗಿದ್ದಾರೆ.


ದುಡುಕುತನದಿಂದ ಚಲಾಯಿಸಿ ಅಪಘಾತಕ್ಕೆ ಕಾರಣನಾದ ಕಾರು ಚಾಲಕ ಉಬೈದುಲ್ಲಾ ವಿರುದ್ದ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net