

ಬಿ.ರಾಘವೇಂದ್ರ ಪೈ ಗಂಗೊಳ್ಳಿ
ಮಳೆಗಾಲ ಮುಗಿದ ಬೆನ್ನಲ್ಲೇ ವೆಂಟೆಡ್ ಡ್ಯಾಂಗಳಿಗೆ ಹಲಗೆ ಅಳವಡಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಸೌಪರ್ಣಿಕಾ ನದಿಗೆ ಬಂಟ್ವಾಡಿಯಲ್ಲಿ ಕಟ್ಟಲಾಗಿರುವ ವೆಂಟೆಡ್ ಡ್ಯಾಂಗೆ ಹಲಗೆ ಅಳವಡಿಸುವ ಕಾರ್ಯ ಬಹುತೇಕ ಮುಕ್ತಾಯ ಹಂತದಲ್ಲಿದೆ.
13 ಕೋಟಿ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಸೌಪರ್ಣಿಕಾ ನದಿಗೆ ಅಡ್ಡಲಾಗಿ ಬಂಟ್ವಾಡಿಯಲ್ಲಿ ನಿರ್ಮಾಣಗೊಂಡಿರುವ ವೆಂಟೆಡ್ ಡ್ಯಾಂ ಕುಂದಾಪುರ ತಾಲೂಕಿನ ಬೃಹತ್ ಡ್ಯಾಂಗಳಲ್ಲಿ ಒಂದು. ಅಗಾಧ ಪ್ರಮಾಣದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದ್ದರೂ ನೀರಿನ ಸದ್ಬಳಕೆ ಮಾಡಿಕೊಳ್ಳಲು ವ್ಯವಸ್ಥೆಗಳಿಲಿಲ್ಲ. ಬೇಸಿಗೆಯಲ್ಲಿ ತಲೆದೋರುತ್ತಿದ್ದ ನೀರಿನ ಅಭಾವ ನೀಗಿಸಿಕೊಳ್ಳುವುದಕ್ಕಾಗಿ ಸೌಪರ್ಣಿಕಾ ನದಿ ನೀರನ್ನು ಸದ್ಬಳಕೆ ಯೋಜನೆ ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಬೇಕಿದೆ.
ಪಶ್ಚಿಮಘಟ್ಟ ಪ್ರದೇಶದಿಂದ ಹರಿದು ಬರುವ ನೀರು ಸಂಗ್ರಹಿಸುವ ಉದ್ದೇಶದಿಂದ ಬಂಟ್ವಾಡಿ ಡ್ಯಾಂನಲ್ಲಿ ಕಿಂಡಿಗಳಿಗೆ ಹಲಗೆ ಅಳವಡಿಸಲಾಗುತ್ತಿದೆ. ನೀರಿನ ಸಂಗಹ್ರದಿಂದ ಸಾವಿರಾರು ಎಕರೆ ಕೃಷಿ ಭೂಮಿ ಸಹಿತ ಹೊಸಾಡು, ತ್ರಾಸಿ, ಸೇನಾಪುರ, ನಾಡ, ಪಡುಕೋಣೆ, ಬಡಾಕೆರೆ, ಹಡವು, ಗುಡ್ಡಮ್ಮಾಡಿ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ವಿಚಾರವಾಗಿ ನೆರವಾಗಲಿದೆ.
ಹಲಗೆ ಅಳವಡಿಸುವ ಕುರಿತು ಸ್ಥಳೀಯ ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಮಳೆಗಾಲ ಮುಗಿದು ತಿಂಗಳುಗಳ ಬಳಿಕ ಹಲಗೆ ಅಳವಡಿಸಿದರೆ ನಿಷ್ಪ್ರಯೋಜಕವಾಗಿದ್ದು, ಉಪ್ಪುನೀರು ಮಿಶ್ರಣಗೊಳ್ಳುವ ಸಾಧ್ಯತೆ ಹೆಚ್ಚಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೂ ಹಾನಿಯಾಗಲಿದೆ. ಈ ಕಾರಣಕ್ಕಾಗಿ ಮಳೆಗಾಲದ ಕೊನೇ ಸಂದರ್ಭ ಅಥವಾ ಮಳೆಗಾಲ ಮುಗಿದ ಕೂಡಲೇ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಕೆ ಆರಂಭಿಸಬೇಕು ಎಂದು ತಿಳಿಸಿದ್ದಾರೆ.
ಮಳೆಗಾಲ ಮುಗಿದ ಬಳಿಕ ನದಿ, ಉಪನದಿಗಳ ಸಿಹಿ ನೀರಿಗೆ ಉಪ್ಪು ನೀರು ಸೇರಿ ಬಳಿಕ ಸಮುದ್ರ ಸೇರುವುದನ್ನು ತಡೆಯುವ ಉದ್ದೇಶದಿಂದ ಡ್ಯಾಂ ಮತ್ತು ಕಿಂಡಿ ಅಣೆಕಟ್ಟುಗಳಿಗೆ ಹಲಗೆಗಳನ್ನ್ನು ತಕ್ಷಣವೇ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಡ್ಯಾಮ್‌ಗಳ ದಕ್ಷತೆ ಬಗ್ಗೆ ಅಧಿಕಾರಿಗಳು ಮತ್ತು ಸಂಬಧಪಟ್ಟ ಇಲಾಖೆ ಗಮನ ಹರಿಸಬೇಕು - ಗುರುರಾಜ್ ಶೆಟ್ಟಿ ಗಂಟಿಹೊಳೆ ಶಾಸಕ ಕೋಟ್ಯಂತರ ರೂ. ವೆಚ್ಚದಲ್ಲಿ ಡ್ಯಾಂ ನಿರ್ಮಿಸಲಾಗಿದೆ. ಆದರೆ ನಿರ್ಮಾಣದ ಮೂಲ ಉದ್ದೇಶ ಇಂದಿಗೂ ಈಡೇರಿಲ್ಲ. ಸೌಪರ್ಣಿಕಾ ನದಿ ನೀರಿನ ಮೂಲ ಸಿಹಿಯಾಗಿದ್ದು, ನೀರಿನ ಬಳಕೆ ಮಾಡಿಕೊಳ್ಳುವಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ಮತುವರ್ಜಿ ವಹಿಸಬೇಕಿದೆ. -ನಾಗೇಂದ್ರ, ಸ್ಥಳೀಯ https://www.vijayavani.net/trouble-from-bullfighting https://www.vijayavani.net/young-man-seriously-injured-in-lorry-collision