

ಉಡುಪಿ : ವಿಶ್ವ ಬಂಟರ ಸಮ್ಮೇಳನ ಅಂಗವಾಗಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಸ್ಥಿತ್ಯಂತರದಲ್ಲಿ ಬಂಟರು; ಶಿಕ್ಷಣ&ನಿರುದ್ಯೋಗ ವಿಚಾರಗೋಷ್ಠಿ ಭಾನುವಾರ ನಡೆಯಿತು. ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಬೇಕು. ಸರ್ಕಾರಿ ಉದ್ಯೋಗಗಳಲ್ಲಿ ಬಂಟರ ಪ್ರಾತಿನಿಧ್ಯ ಣವಾಗಿದ್ದು, ಪೋಷಕರು ಸ್ಪರ್ಧಾತ್ಮಕ ಪರೀೆ ಬರೆಯಲು ಪ್ರೋತ್ಸಾಹಿಸಬೇಕು ಎಂಬ ಬಗ್ಗೆ ಒಕ್ಕೊರಲಿನ ಆಗ್ರಹವ್ಯಕ್ತವಾಯಿತು.
ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಉದ್ಯೋಗ ಪಡೆಯಲು ಶಿಕ್ಷಣ ಅತೀ ಅಗತ್ಯ. ಕೃಷಿ ಪ್ರಧಾನ ಬಂಟ ಸಮಾಜ ಆಧುನಿಕ ಶಿಕ್ಷಣ ಪಡೆದು ಕೃಷಿಯಿಂದ ವಿಮುಖವಾಗುತ್ತಿದೆ. ಆಸಕ್ತಿಕರ ಕ್ಷೇತ್ರದಲ್ಲಿ ಸಾಧನೆ ಮಾಡುವುದರಿಂದ ಯಶಸ್ಸು ಪಡೆಯಬಹುದು. ಅನೇಕ ಕಂಪೆನಿಗಳಲ್ಲಿ ಉದ್ಯೋಗ ಇದ್ದರೂ ಅದಕ್ಕೆ ಸೂಕ್ತ ಅಭ್ಯರ್ಥಿಯ ಕೊರತೆ ಕಾಡುತ್ತಿದೆ ಎಂದರು.
ಯುನಿವರ್ಸಲ್ ಗ್ರೂಪ್ ಆ್ ಇನ್ನ್ಟಿಟ್ಯೂಟ್ನ ಉಪೇಂದ್ರ ಶೆಟ್ಟಿ ಮಾತನಾಡಿ, ಉದ್ಯೋಗಾಕಾಂಗಳು ಮತ್ತು ಉದ್ಯೋಗದಾತರ ಮಧ್ಯೆ ಅಂತರವಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಮುಖ ಬಂಟರ ಸಂಗಳು ಕೌಶಲ್ಯ ಕೇಂದ್ರಗಳನ್ನು ತೆರೆಯಬೇಕು. ಮಾರುಕಟ್ಟೆಗೆ ಅನುಗುಣವಾಗಿ ಉದ್ಯೋಗ ತರಬೇತಿ ನೀಡಬೇಕು. ಮಕ್ಕಳಿಗೆ ಉಚಿತ ವಸತಿ&ಊಟದ ವ್ಯವಸ್ಥೆಯನ್ನು ಸಂ ಕಲ್ಪಿಸಿದರೆ ನನ್ನ ಸಂಸ್ಥೆಯಲ್ಲಿ 50 ಮಂದಿಗೆ ಉಚಿತ ತರಬೇತಿ ನೀಡಲಾಗುವುದು ಎಂದರು.
ಅದಾನಿ ಸಮೂಹದ ದಣ ಭಾರತ ಉಪಾಧ್ಯಕ್ಷ ಕಿಶೋರ್ ಆಳ್ವಾ ಮಾತನಾಡಿ, ಬಂಟ ಸಮುದಾಯ ಬಲಿಷ್ಠಗೊಳ್ಳಬೇಕಾದರೆ ಯುಪಿಎಸ್ ಸಿ ಪರೀೆ ಬರೆಯುವ ಕಡೆಗೆ ಅಸಕ್ತಿ ಹೊಂದಬೇಕು. ಸರ್ಕಾರಿ ಉದ್ಯೋಗ ಪಡೆಯಬೇಕು ಎಂದು ಹೇಳಿದರು.
ಬಂಟರ ವಾಹಿನಿ ಸಂಪಾದಕ ಪ್ರದಿಪ್ ರೈ ಐಕಳ ಮಾತನಾಡಿ, ಬಂಟರ ಸಂಗಳು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಸಮಿಯನ್ನು ರಚಿಸಿಕೊಂಡು ಹಳ್ಳಿ ಪ್ರದೇಶದಲ್ಲಿರುವ ಬಡಕುಟುಂಬದ 10 ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಮತ್ತು ಉದ್ಯೋಗವನ್ನು ಕಲ್ಪಿಸಿಕೊಡಬೇಕು ಎಂದರು.
ಮುಂಬೈ ವಿವಿ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಶೆಟ್ಟಿ ಮಾತನಾಡಿ, ಬಂಟರು ಶ್ರಮ ಸಂಸತಿಯಿಂದ ಬಂದವರು. ಮಕ್ಕಳು ವಿದ್ಯಾವಂತರಾಗಿದ್ದರೂ ಪರಿಣತರಲ್ಲ. ಪದವಿ ಜೊತೆಗೆ ಅವರನ್ನು ಪರಿಣತರನ್ನಾಗಿ ಮಾಡುವ ಜಬಾಬ್ದಾರಿ ಸಂ ವಹಿಸಬೇಕು ಎಂದರು.
ಉದ್ಯಮಿಗಳಾದ ಆನಂದ ಶೆಟ್ಟಿ ತೋನ್ಸೆ, ಅಶೋಕ್ ಕುಮಾರ್ ಶೆಟ್ಟಿ, ಡಾ. ಆರ್.ಕೆ. ಶೆಟ್ಟಿ, ವಕ್ವಾಡಿ ಪ್ರವಿಣ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಮುಂಬೈ ಬಂಟರ ಸಂದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.
ಜಾಗತಿಕ ಬಂಟರ ಸಂದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಪ್ರಸ್ತಾವನೆಗೈದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.