

ನರೇಗಲ್ಲ: ಹನುಮಂತ ಅತ್ಯಂತ ಶಕ್ತಿಶಾಲಿ ದೇವರು. ಅವನನ್ನು ನಂಬಿ ಪೂಜಿಸಿದರೆ, ಭಜಿಸಿದರೆ ನಮ್ಮ ಸಂಕಷ್ಟಗಳನ್ನು ದೂರ ಮಾಡುತ್ತಾನೆ. ನೀವುಗಳು ಹನುಮ ಮಾಲಾ ಧರಿಸುವ ಮೂಲಕ ಅತ್ಯುತ್ತಮ ಕೆಲಸ ಮಾಡಿದ್ದೀರಿ. ನಿತ್ಯವೂ ಹನುಮನನ್ನು ಪೂಜಿಸುತ್ತಿರುವ ನಿಮ್ಮ ಸಂಕಷ್ಟಗಳೆಲ್ಲ ದೂರವಾಗಲಿ ಎಂದು ಜಯಂತಿ ಅಕ್ಕನವರು ಹೇಳಿದರು.
ಪಟ್ಟಣದ ಶ್ರೀ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹನುಮ ಮಾಲಾಧಾರಿಗಳಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಅವರು ಮಾತನಾಡಿದರು. ಸ್ಥಳೀಯ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಸವಿತಕ್ಕ ಮಾತನಾಡಿ, ನರೇಗಲ್ಲ ಪಟ್ಟಣದಲ್ಲಿ ಅನೇಕ ಧಾರ್ವಿುಕ ಕಾರ್ಯಗಳು ನಡೆಯುತ್ತಲೆ ಇರುತ್ತವೆ. ಇಲ್ಲಿ ಹನುಮ ಮಾಲಾಧಾರಿಗಳಿದ್ದಂತೆ ಅಯ್ಯಪ್ಪಸ್ವಾಮಿ ಭಕ್ತರೂ ಇದ್ದಾರೆ. ಇಂತಹ ಧಾರ್ವಿುಕ ಕಾರ್ಯಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು. ರವಿ ಗೊರ್ಲಿ, ಶಿವು ಮುಳಗುಂದ, ವಿನೋದ ರಾಯಬಾಗಿ, ಶ್ರೀಕಾಂತ ಮಣ್ಣೊಡ್ಡರ, ಮಹಾದೇವ, ಮಾಲಾಧಾರಿಗಳು ಪಾಲ್ಗೊಂಡಿದ್ದರು.