ಸಾರ್ವಜನಿಕ ಹಿತಾಸಕ್ತಿಗೆ ಬೆಲೆ ಸಿಗದ ಕಾರಣ ಧರಣಿಗೆ ಮುಂದಾದ ಸಾಮಾಜಿಕ ಕಾರ್ಯಕರ್ತ

IMG-20231220-WA0022
Published on

ಪುತ್ತೂರು: ಗ್ರಾಮದ ವಿವಿಧ ಬೇಡಿಕೆಗಳನ್ನು ಕಂದಾಯ ಇಲಾಖೆ ಹಾಗೂ ಪಂಚಾಯಿತಿ ರಾಜ್ ಇಲಾಖೆ ಈಡೇರಿಸಿಲ್ಲ ಎಂದು ಬನ್ನೂರು ಗ್ರಾಮದ ಸಾಮಾಜಿಕ ಹೋರಾಟಗಾರ ರತ್ನಾಕರ ಪ್ರಭು ಬುಧವಾರ ಸಾಯಂಕಾಲದಿಂದ ಪಂಚಾಯಿತಿಯ ಮುಂಭಾಗ ಧರಣಿ ಪ್ರಾರಂಭಿಸಿದ್ದಾರೆ.

ಗ್ರಾಮದ ಕಾಲುದಾರಿಗಳ ಸಮರ್ಪಕ ವ್ಯವಸ್ಥೆ ಗೊಳಿಸಬೇಕು ಹಾಗೂ ಬನ್ನೂರು ಕಜೆ ಕ್ಷೇಮ ಆರೋಗ್ಯ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಲವು ಸಮಯದಿಂದ ಬೇಡಿಕೆಯನ್ನು ಸಲ್ಲಿಸಿಕೊಂಡು ಬಂದಿದ್ದು, ಜಿಲ್ಲಾಡಳಿತ ಸೇರಿ ಅಧಿಕಾರಿಗಳು ನಿರ್ಲಕ್ಷ್ಯ ತನ ತೋರಿಸಿದ್ದಾರೆಂದು ಅವರು ಆರೋಪಿಸಿದ್ದಾರೆ. ವ್ಯವಸ್ಥೆ ಸರಿಯಾಗುವ ತನಕ ಧರಣಿ ಕೈಬಿಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲಾಧಿಕಾರಿಯವರಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದಾಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಲ್ಲಿ ಈ ಬಗ್ಗೆ ಕೇಳಬೇಕಷ್ಟೇ ನನಗೆ ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net