

ಪುತ್ತೂರು: ಸಂಘದಲ್ಲಿ ಕಳೆದ ನಾಲ್ಕು ಅವಽಯಿಂದ ಅವಿರೋಧ ಆಯ್ಕೆಯಾಗುತ್ತಿದ್ದು, ಸಹಕಾರಿ ರಂಗದಲ್ಲಿ ಇದು ವಿಶೇಷ ಹೆಜ್ಜೆ. ಆರ್ಥಿಕ ಸಂಸ್ಥೆಯಲ್ಲಿ ರಾಜಕೀಯ ತರದೆ ಎಲ್ಲರು ಒಗ್ಗಟ್ಟಿನಿಂದ ಮುನ್ನಡೆದಾಗ ಸಂಘಗಳು ಉನ್ನತಿಯಾಗುತ್ತದೆ. ಅವನತಿಯ ಸ್ಥಿತಿಯಲ್ಲಿದ್ದ ಸಹಕಾರಿ ಸಂಘವನ್ನು ಮೇಲೆತ್ತಿ ನೂತನ ಕಟ್ಟಡ ರಚಿಸಿ ಸುಸ್ಥಿತಿಯಲ್ಲಿ ಇರುವ ಕಾರ್ಯವಾಗಿದೆ. ನೂತನ ಆಡಳಿತ ಮಂಡಳಿ ಎಲ್ಲರ ಸಹಕಾರದೊಂದಿಗೆ ಇನ್ನಷ್ಟು ಎತ್ತರಕ್ಕೇರುವಂತಾಗಲಿ ಎಂದು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.
ಬನ್ನೂರು ರೈತ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಬಳಿಕ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷರಾಗಿ ಈಶ್ವರ ಭಟ್ ಪಂಜಿಗುಡ್ಡೆ, ಉಪಾಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಪೂವಪ್ಪ ಗೌಡ ಡಿ., ಶ್ರೀನಿವಾಸ ಕೆ., ಶಶಿಕಲಾ ಡಿ. ಶೆಟ್ಟಿ, ಮೊಹಮ್ಮದ್ ಅಶ್ರಫ್ ಕಲ್ಲೇಗ, ಜಯಲಕ್ಷ್ಮೀ ಸುರೇಶ್, ಸುಬ್ರಹ್ಮಣ್ಯ ಗೌಡ, ಸುಭಾಶ್ ನಾಯಕ್ ನೆಕ್ಕರಾಜೆ, ಮೋಹನ್, ದೇವಾನಂದ ಕೆ., ರಾಜು ಎನ್. ಆಯ್ಕೆಯಾದರು. ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಮಾರಾಟ ಅಽಕಾರಿ ಶೋಭಾ ಎನ್. ಎಸ್. ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಽಕಾರಿ ರಾಧಾ ಬಿ. ರೈ ಸಹಕರಿಸಿದರು.
ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟ ಅಽಕಾರಿ ಶೋಭಾ ಎನ್. ಎಸ್., ಸಹಕಾರಿ ಯೂನಿಯನ್‌ನ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ, ಸಿಬ್ಬಂದಿ ವರ್ಗ, ಕೋಟಿ - ಚೆನ್ನಯ ಜೋಡು ಕರೆ ಕಂಬಳ ಸಮಿತಿ, ಪಡ್ನೂರು ಧೂಮಾವತಿ ಯುವಕ ಮಂಡಲ ಹಾಗೂ ಪಡ್ನೂರು ಎರ್ಮುಂಜ ಪಳ್ಳ ಶ್ರೀ ಅಶ್ವಥಕಟ್ಟೆ ದೇವತಾ ಸಮಿತಿ ಪದಾಽಕಾರಿಗಳು, ಬನ್ನೂರು ರೈತ ಸೇವಾ ಸಹಕಾರಿ ಸಂಘದ ಸಿಬ್ಬಂದಿ, ಅಭಿಮಾನಿಗಳು ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಎಲ್ಲರ ಸಹಕಾರದಿಂದ ಬನ್ನೂರು ರೈತ ಸೇವಾ ಸಹಕಾರಿ ಸಂಘದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಚುನಾವಣೆಯಿಲ್ಲದೆ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸಹಕಾರಿ ಸಂಘ ಅಭಿವೃದ್ಧಿಯಾಗಬೇಕೆಂಬ ದೃಷ್ಠಿಯಿಂದ ಚುನಾವಣೆಯಿಲ್ಲದೆ ಅನಗತ್ಯ ಖರ್ಚು ತಪ್ಪಿಸಲಾಗುತ್ತಿದೆ. ಶಶಿಕುಮಾರ್ ರೈ ಅವರು ಎಲ್ಲರನ್ನೂ ಹೊಂದಾಣಿಕೆಯಲ್ಲಿ ತೆಗೆದುಕೊಂಡು ಹೋಗುವುದರಲ್ಲಿ ಯಶಸ್ವಿಯಾಗಿದ್ದಾರೆ. ಒಗ್ಗಟ್ಟಿನಿಂದ ಸೌಹಾರ್ದತೆಯಿಂದ ಸಹಕಾರಿ ಸಂಘ ಮುನ್ನಡೆಯುವ ಕಾರ್ಯವಾಗಬೇಕು.
| ಈಶ್ವರ ಭಟ್ ಪಂಜಿಗುಡ್ಡೆ
ಅಧ್ಯಕ್ಷರು, ಬನ್ನೂರು ರೈತ ಸೇವಾ ಸಹಕಾರಿ ಸಂಘ