ಉತ್ತರ ಕರ್ನಾಟಕ ಸಾಂಸೃತಿಕ ಸಂಘದಿಂದ ಬನ್ನಿಪೂಜೆ

24
Published on

ಮೈಸೂರು: ಉತ್ತರ ಕರ್ನಾಟಕ ಸಾಂಸೃತಿಕ ಸಂಘದಿಂದ ನಗರದಲ್ಲಿ ಭಾನುವಾರ ಬನ್ನಿಪೂಜೆ ಆಚರಿಸಲಾಯಿತು.

ಕುವೆಂಪುನಗರದ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಂಘದ ಗೌರವಾಧ್ಯಕ್ಷ ಎಸ್.ಆರ್.ಪಾಟೀಲ್ ಉದ್ಘಾಟಿಸಿ, ಶುಭ ಕೋರಿದರು.

ಅಧ್ಯಕ್ಷ ಪಿ.ವಿ.ಅವರಾದಿ ಮಾತನಾಡಿ, ಬನ್ನಿ ತೆಗೆದುಕೊಂಡು ಬಂಗಾರದಾಗೆ ಇರುವ ಎನ್ನುವ ಸಂದೇಶ ಸಾರುವುದು ದಸರಾ ಹಬ್ಬ ವೈಶಿಷ್ಟೃ. ಉತ್ತರ ಕರ್ನಾಟಕದಲ್ಲಿ ಮನೆ, ಮನೆಗೆ ತೆರಳಿ ಈ ಹಬ್ಬ ಆಚರಿಸಲಾಗುತ್ತದೆ ಎಂದರು.

ಉತ್ತರ ಕರ್ನಾಟಕದಿಂದ ಬಂದಿರುವ ನಾವು ಸಂಘಟನೆ ಮಾಡಿಕೊಂಡು ಒಂದೆಡೆ ಸೇರಿ ಆಚರಿಸುತ್ತದೆ. ಈ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ಮರೆಬಾರದು ಎನ್ನುವ ಉದ್ದೇಶದಿಂದ ಇಲ್ಲಿಯೇ ಆಚರಣೆ ಮಾಡುತ್ತೀವೆ ಎಂದು ಹೇಳಿದರು.

ಸಂಘಟನೆ ಇನ್ನು ಹೆಚ್ಚು ಬಲಗೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕರ್ನಾಟಕ ಮಂದಿ ಇದರಲ್ಲಿ ಸದಸ್ಯರಾಗಬೇಕು. ಆಗಾಗ್ಗೆ ನಮ್ಮ ಸಂಸ್ಕೃತಿ, ಪರಂಪರೆಯ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ನಮ್ಮ ಮಕ್ಕಳಿಗೆ ಅದನ್ನು ತಿಳಿಸಿಕೊಡಬೇಕು ಎಂದರು.

ಕಾರ್ಯಕ್ರಮ ಪ್ರಾಯೋಜಕರಾದ ಬಸವರಾಜ ವಿಶ್ವಜ್ಞ, ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ರಾಜಶೇಖರ್ ಎಂ.ಜವಳಗಿ, ಮೀನಾಕ್ಷಿ ಸದಾಶಿವ ಚಟ್ನೆ ಮತ್ತು ತಂಡದವರನ್ನು ಸನ್ಮಾನಿಸಲಾಯಿತು.

ಸಂಘದ ಕಾರ್ಯಾಧ್ಯಕ್ಷ ಪ್ರಮೋದ್, ಸಾಂಸ್ಕೃತಿಕ ಕಾರ್ಯದರ್ಶಿ ಆಶೋಕ್ ಯಂಡಿಗೇರಿ, ಖಜಾಂಚಿ ಪ್ರಕಾಶ್ ಇತರರು ಇದ್ದರು. ಕಾರ್ಯಕ್ರಮದ ನಂತರ ಸಂಗೀತ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net