

ಬನ್ನಿಕುಪ್ಪೆ : ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಜೆ.ಡಿ ಹರೀಶ್‌ಗೌಡ ಹೇಳಿದರು. ಸಮೀಪದ ಮರಳಿನ ಕೊಪ್ಪಲು ಗ್ರಾಮದಲ್ಲಿ 12 ಲಕ್ಷ ರೂ. ಅಂದಾಜು ವೆಚ್ಚದ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಅಪ್ಪೇನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಮುಂಬರುವ ದಿನಗಳಲ್ಲಿ ಡಾಂಬರೀಕರಣ ಗೊಳಿಸಲಾಗುವುದು. ವೀರಶೈವ ಸಮಾಜದ ಬೀದಿಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲು ಅನುದಾನ ಮಂಜೂರು ಮಾಡಿಸುವೆ ಎಂದು ಶಾಸಕರು ಭರವಸೆ ನೀಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಗೋವಿಂದನಾಯಕ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗೋವಿಂದೇಗೌಡ, ಗ್ರಾಮದ ನಾಯಕ ಸಮಾಜದ ಮುಖಂಡ ಯೋಗೇಶ್, ಪಾಪಣ್ಣ ಇತರರು ಭಾಗವಹಿಸಿದ್ದರು.