ಕಲಬುರಗಿ ಜೈಲಿನಲ್ಲಿ ನಿಷೇಧಿತ ವಸ್ತು ಪತ್ತೆ

GLB_Central Presion Jail
Published on

ಕಲಬುರಗಿ: ನಗರದ ಹೊರವಲಯದ ಕೇಂದ್ರ ಕಾರಾಗೃಹದ ಒಳ ಗೋಡೆ ಬಳಿ ನಿಷೇಧಿತ ತಂಬಾಕು ವಸ್ತುಗಳ ಪತ್ತೆಯಾಗಿವೆ.

ಜೈಲಿನ ಹೊರಭಾಗದಿಂದ ಬಾಲ್ ಆಕಾರದಲ್ಲಿ ಉಂಡೆ ಮಾಡಿ ನಿಷೇಧಿತ ವಸ್ತುಗಳನ್ನು ಕಿಡಿಗೇಡಿಗಳು ಬಿಸಾಕಿದ್ದಾರೆ.

ಪ್ಲಾಸ್ಟಿಕ್ ಚೀಲದಲ್ಲಿ ತಂಬಾಕು, ಗುಟ್ಕಾ, ಬೀಡಿ, ಪಾನ್ ಮಸಾಲಾ ಪತ್ತೆಯಾಗಿವೆ. ಜೈಲಿನಲ್ಲಿರೋ ತಮ್ಮವರ ಕೈದಿಗಳಿಗಾಗಿ ತಂಬಾಕು, ಗುಟ್ಕಾ ಬಿಸಾಕಿರೋ ಶಂಕೆ ವ್ಯಕ್ತವಾಗಿದೆ.

ತಕ್ಷಣ ಪ್ಲಾಸ್ಟಿಕ್ ಚೀಲವನ್ನು ಕರ್ತವ್ಯನಿರತ
ಜೈಲು ಸಿಬ್ಬಂದಿ ಸಂಗೀತಾ ವಶಕ್ಕೆ ಪಡೆದಿದ್ದಾರೆ. ಜೈಲಿನ ಕಾಂಪೌಂಡ್‌ ಒಳಗೆ ನಿಷೇಧಿತ ವಸ್ತುಗಳನ್ನು ಯಾರು,ಯಾರಿಗಾಗಿ ಬಿಸಾಕಿದರು ಅನ್ನೊ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net