ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸಂಜೀವ ಸುವರ್ಣ ರಾಜೀನಾಮೆ

bannanje sanjeeva suvarna WEB
Published on

ಉಡುಪಿ: ಇಲ್ಲಿನ ಯಕ್ಷಗಾನ ಕೇಂದ್ರಕ್ಕೆ ಗುರು, ಕಲಾವಿದ ಬನ್ನಂಜೆ ಸಂಜೀವ ಸುವರ್ಣ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ಅವರ ರಾಜೀನಾಮೆ ಅಂಗೀಕಾರವಾಗಿದೆ. 40 ವರ್ಷ ಯಕ್ಷಗಾನ ಗುರುವಾಗಿದ್ದ ಸುವರ್ಣ ಸಮಿತಿಗೆ ಮೂರು ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು.

ಅವರು ಶಾಲೆಯಲ್ಲಿ ಓದಿದ್ದು 2ನೇ ತರಗತಿ ತನಕ. ಗುಂಡಿಬೈಲು ರಾಮಕೃಷ್ಣ ಶೆಟ್ಟಿ, ಮೆಟ್ಕಲ್ ಕೃಷ್ಣಯ್ಯ ಶೆಟ್ಟಿ, ಮಾರ್ಗೋಳಿ ಗೋವಿಂದ ಸೇರಗಾರ ಇವರ ಗುರುಗಳು.

ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಮಟಪಾಡಿ ವೀರಭದ್ರ ನಾಯಕ ಮೂಲಕ ಕಲಾ ಬದುಕಿನ ಹೊಸ ಬಾಗಿಲು ತೆರೆಯಿತು. ಗುರು ನೀಲಾವರ ರಾಮಕೃಷ್ಣಯ್ಯ ಭಾಗವತಿಕೆ ಯಕ್ಷಗಾನದ ಸಂಸ್ಕಾರ ಅರಿತು, ಗುರು ಹಿರಿಯಡಕ ಗೋಪಾಲ ರಾವ್, ಬಿರ್ತಿ ಬಾಲಕೃಷ್ಣ ಅವರೊಂದಿಗೆ ಮಾಯಾರಾವ್ ಅವರ ತಂಡದಲ್ಲಿ ಯುರೋಪ್ ಪ್ರವಾಸ ಮಾಡುವುದರೊಂದಿಗೆ ಯಕ್ಷಗಾನ ಸಾಧನೆಯ ಮತ್ತೊಂದು ಮಜಲು ತೆರೆದುಕೊಂಡಿತು. ಕೋಟ ಶಿವರಾಮ ಕಾರಂತರ ಬ್ಯಾಲೆಯಂಥ ಯಕ್ಷಗಾನ ಪ್ರಯೋಗಗಳಲ್ಲಿ ಭಾಗವಹಿಸಿ ಹಲವು ದೇಶಗಳನ್ನು ಸುತ್ತಿದರು.

ಜರ್ಮನಿಯ ಕ್ಯಾಥರಿನ್ ಬೈಂದ್ರ್ ಅವರು ಸಂಜೀವ ಸುವರ್ಣರ ಮಾರ್ಗದರ್ಶನ ಪಡೆದು ಯಕ್ಷಗಾನ ಕ್ಷೇತ್ರದಲ್ಲಿ ಪಿಎಚ್.ಡಿ ಪಡೆದಿದ್ದರು. ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಯಕ್ಷಗಾನ ಕಲಿಸಿದ್ದು ಸಂಜೀವ ಸುವರ್ಣರ ಹೆಚ್ಚುಗಾರಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net