ಬನ್ನಂಜೆಯಲ್ಲಿ ನಾರಾಯಣಗುರು ವೃತ್ತ ಮರುಸ್ಥಾಪನೆ

udp-31-circle
Published on

ಉಡುಪಿ: ಬನ್ನಂಜೆ ನಾರಾಯಣಗುರು ವೃತ್ತವನ್ನು ಏಕಾಏಕಿ ತೆರವುಗೊಳಿಸಿ ಬ್ಯಾಂಕ್​ ಆಫ್​ ಬರೋಡ ನಾಮಫಲಕದ ವೃತ್ತ ರಚಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶವ್ಯಕ್ತವಾದ ಬಳಿಕ ಭಾನುವಾರ ಸಾಯಂಕಾಲ ಪೊಲೀಸರು ನಾರಾಯಣ ಗುರು ವೃತ್ತ ಮರು ಸ್ಥಾಪಿಸಿದ್ದಾರೆ.

ನಗರಸಭೆಯಿಂದ ಅಧಿಕೃತವಾಗಿ ಅಳವಡಿಸಿದ್ದ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಯಾವುದೇ ಮುನ್ಸೂಚ ಇಲ್ಲದೆ ತೆರವು ಮಾಡಲಾಗಿತ್ತು. ಶನಿವಾರ ಹಳೆ ವೃತ್ತವನ್ನು ಕಿತ್ತು ಹಾಕಿ, ಪಾಳು ಬಿದ್ದ ಜಾಗದ ಹೊದೆಗಳ ಮಧ್ಯೆ ಬಿಸಾಡಲಾಗಿತ್ತು. ಬಳಿಕ ಬ್ಯಾಂಕ್​ ಅಫ್​ ಬರೋಡ ನಾಮಫಲಕ ಅಳವಡಿದ್ದ ವೃತ್ತವನ್ನು ಹಾಕಲಾಗಿತ್ತು. ಶಾಸಕ ಯಶ್ಪಾಲ್​ ಸುವರ್ಣ, ಮಾಜಿ ಶಾಸಕ ರುಪತಿ ಭಟ್​, ಬಿಲ್ಲವ "ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದವು. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಪೊಲೀಸರು ಹಳೆ ವೃತ್ತವನ್ನು ಮತ್ತೆ ತಂದಿಟ್ಟಿದ್ದಾರೆ.

ಅಧಿಕೃತ ವೃತ್ತ

2022ರಲ್ಲಿ ನಗರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಬರುವ ವೃತ್ತ ಹಾಗೂ ಜಂಕ್ಷನ್​ಗಳಿಗೆ ಮಹಾಪುರುಷರ ಹಾಗೂ ಗಣ್ಯವ್ಯಕ್ತಿಗಳ ಹೆಸರುಗಳನ್ನು ಪದನಾಮಕರಣ ಮಾಡುವ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ತೀಮಾರ್ನ ಕೈಗೊಳ್ಳಲಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಯವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಇದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿ ಆದೇಶಿಸಿತ್ತು. ಬನ್ನಂಜೆ ಸರ್ಕಲ್​ಗೆ ನಾರಾಯಣಗುರು ವೃತ್ತ, ಕಲ್ಸಂಕ ವೃತ್ತಕ್ಕೆ ಮಧ್ವಾಚಾರ್ಯ ವೃತ್ತ, ಡಯಾನಾ ಸರ್ಕಲ್​ಗೆ ವಾದಿರಾಜ ವೃತ್ತ, ಸಂತೆಕಟ್ಟೆ ಕಲ್ಯಾಣಪುರ ರಸ್ತೆ ಜಂಕ್ಷನ್​ಗೆ ಕೋಟಿ - ಚೆನ್ನಯ್ಯ ವೃತ್ತ, ಬ್ರಹ್ಮಗಿರಿ ದೊಡ್ಡ ಸರ್ಕಲ್​ಗೆ ಆಸ್ಕರ್​ ಫೆರ್ನಾಂಡಿಸ್​ ಸರ್ಕಲ್​ ಹಾಗೂ ಪರ್ಕಳದಿಂದ ಕೋಡಂಗೆ ಹಾಗೂ ಕೋಡಂಗೆಯಿಂದ ಸರಳಬೆಟ್ಟುಗೆ ಹಾದುಹೋಗುವ ಮಧ್ಯದಲ್ಲಿರುವ ವೃತ್ತಕ್ಕೆ ಶ್ರೀರಾಮ ವೃತ್ತ ಎಂದು ನಾಮಕರಣ ಮಾಡಲು ಆದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net