ಬನ್ನಂಜೆ ಬಾಬು ಆಮೀನ್​ ಜಾನಪದ ಪ್ರಶಸ್ತಿ ಪ್ರದಾನ

udp-3-award
Published on

ಉಡುಪಿ: ದೈವಸ್ಥಾನಗಳಲ್ಲಿ ಕಾರಣಿಕಕ್ಕೆ ಆರಾಧನೆ ಮಾತ್ರವಲ್ಲದೆ ಸತ್ಯ&ಧರ್ಮ&ನ್ಯಾಯವೂ ಕಾರಣವಾಗಿದೆ. ಇದರಿಂದಾಗಿಯೇ ಕೋಟಿ&ಚೆನ್ನಯರು ಪುಣ್ಯಪುರುಷರಾಗಿದ್ದಾರೆ. ಭ್ರಷ್ಟರ ಕಾಲದಲ್ಲಿ ಬದುಕುತ್ತಿರುವ ನಮಗೆ ಜೋಡಿ ಬಂಟರು ಆದರ್ಶವಾಗಬೇಕು ಎಂದು ನಿವೃತ್ತ ಪ್ರಾಂಶುಪಾಲ ಕನರಾಡಿ ವಾದಿರಾಜ್​ ಭಟ್​ ಹೇಳಿದರು.

ಚಿಟ್ಪಾಡಿಯಲ್ಲಿ ಭಾನುವಾರ ಯುವವಾಹಿನಿ ಉಡುಪಿ ಘಟಕದ ವತಿಯಿಂದ ಕೊಡಮಾಡಿದ ಬನ್ನಂಜೆ ಬಾಬು ಆಮೀನ್​ ಜಾನಪದ ವಿದ್ವಾಂಸ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಬನ್ನಂಜೆ ಬಾಬು ಅಮೀನ್​ ಅವರಂಥ ಹಿರಿಯರು ಹುಟ್ಟುಹಾಕಿದ ಪ್ರಶಸ್ತಿಯ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮೂಲಕ ಯುವವಾಹಿನಿ ಸಂಟನೆ ಇತರರಿಗೆ ಮಾದರಿಯಾಗಿದೆ. ಇಂಥ ಕಾರ್ಯಕ್ರಮಗಳಿಗೆ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಬರುವ ಮೂಲಕ ನಮ್ಮ ಸಂಸತಿ, ಪರಂಪರೆಯನ್ನು ಪರಿಚಯಿಸುವ ಕೆಲಸ ನಡೆಯಬೇಕು ಎಂದರು.

ಹಿರಿಯ ಬೈದೇರು ದರ್ಶನ ಪಾತ್ರಿ ಸೂಡ ಕೋಟಿ ಪೂಜಾರಿ ಅವರಿಗೆ ಜಾನಪದ ಕಲಾವಿದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾಜ ಸೇವಕ ಈಶ್ವರ ಮಲ್ಪೆ ಅವರ ಪರವಾಗಿ ಪತ್ನಿ ಗೀತಾ ಅವರನ್ನು ಸನ್ಮಾನಿಸಲಾಯಿತು.

ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷೆ ಅಮಿತಾಂಜಲಿ ಕಿರಣ್​ ಅಧ್ಯಕ್ಷತೆ ವಹಿಸಿದ್ದರು. ಮುಕ್ಕದ ಶ್ರೀನಿವಾಸ್​ ಕಾಲೇಜಿನ ಪ್ರಾಧ್ಯಾಪಕ ಎಂ.ಎಸ್​. ಕೋಟ್ಯಾನ್​, ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಆಮೀನ್​, ಸಾಹಿತಿ ಮುದ್ದು ಮೂಡುಬೆಳ್ಳೆ, ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರ್​, ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಂಚಾಲಕ ಭಾಸ್ಕರ್​ ಸುವರ್ಣ, ಲೋಕೇಶ್​ ಕೋಟ್ಯಾನ್​, ಸಂಚಾಲಕ ಭಾಸ್ಕರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net