ಬನ್ನಂಜೆ ಕೃತಿಕುಸುಮದಿಂದ ಮಧ್ವನವಮೀ ಅರ್ಥಪೂರ್ಣ

IMG-20240119-WA0019
Published on

ಉಡುಪಿ: ಬನ್ನಂಜೆ ಗೋವಿಂದಾಚಾರ್ಯರ ಕೃತಿಕುಸುಮದೊಂದಿಗೆ ಮಧ್ವನವಮೀ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಆಚಾರ್ಯ ಮಧ್ವರ ಹತ್ತಾರು ಕೃತಿಗಳನ್ನು ಹೊಸ ಬಾಷ್ಯ ಹೊಸ ಹೊಳಪಿನೊಂದಿಗೆ ಜಗತ್ತಿಗೆ ನೀಡಲು ಬನ್ನಂಜೆಯವರು ತಮ್ಮ ಬದುಕನ್ನೇ ಅರ್ಪಿಸಿಕೊಂಡ ಮಹಾನುಭಾವರು ಎಂದು ಪಲಿಮಾರು ಶ್ರೀ ವಿದ್ಯಾಧಿಶತೀರ್ಥ ಶ್ರೀಪಾದರು ಬಣ್ಣಿಸಿದರು.

ಶುಕ್ರವಾರ ಮಧ್ವನವಮೀ ಪರ್ವದಿನ ಅಂಗವಾಗಿ ಅಂಬಲಪಾಡಿಯ ಈಶಾವಾಸ್ಯಂನಲ್ಲಿ ನಡೆದ ಸಮಾರಂಭದಲ್ಲಿ ಆಚಾರ್ಯ ಮಧ್ವರ ಅಪೂರ್ವ ಕೃತಿ ವಿಷ್ಣುತತ್ತ್ವ ರ್ನಿಣಯಕ್ಕೆ ಬಹುಶ್ರುತ ವಿದ್ವಾಂಸ ಡಾ. ಬನ್ನಂಜೆ ಗೋವಿಂದಾಚಾರ್ಯರು ಬರೆದ ವ್ಯಾಖ್ಯಾನ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.

ಶ್ರೀ ಚಿತ್ರಾಪುರ ಶ್ರೀ ವಿದ್ಯೇಂದ್ರತಿರ್ಥ ಶ್ರಿಪಾದರು ಉಪಸ್ಥಿತರಿದ್ದರು. ಈಶಾವಾಸ್ಯ ಪ್ರತಿಷ್ಠಾನ ಅಂಬಲಪಾಡಿ ಪ್ರಕಾಶಿತ ಕೃತಿಯ ಸಂಪಾದಕರಾದ ವಿದ್ವಾನ್​ ವಿಜಯಸಿಂಹ ತೋಂಟತಿಲ್ಲಾಯ , ಡಾ. ರಾಮನಾಥಾಚಾರ್ಯ, ಹಿರಿಯ ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಶುಭಾಶಂಸನೆಗೈದರು. ಪ್ರತಿಷ್ಠಾನದ ಬಾಲಾಜಿ ರಾಘವೇಂದ್ರಾಚಾರ್ಯ ಉಪಸ್ಥಿತರಿದ್ದರು. ವಾಸುದೇವ ಭಟ್​ ಪೆರಂಪಳ್ಳಿ ಕಾರ್ಯಕ್ರಮನಿರೂಪಿಸಿದರು. ವಿನಯಭೂಷಣ ಆಚಾರ್ಯ ವಂದನಾರ್ಪಣೆಗೈದರು. ವಿದ್ವಾನ್​ ಶ್ರೀಶ ಭಟ್​ ಮುದರಂಗಡಿ ಸುದರ್ಶನ ಹೋಮ ನೆರವೇರಿಸಿದರು. ರಮಾ ಆಚಾರ್ಯ, ಅಭಿರಾಮ ತಂತ್ರಿ , ರಾಹುಲ್​ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net