ಎಲ್ಲರಿಗೂ ಬ್ಯಾಂಕ್​ ಸೌಲಭ್ಯ ತಲುಪಲಿ: ಶೆಟ್ಟರ

19 Jaggu 7
ಬೆಳಗಾವಿ ಜಿಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಬೆಳಗಾವಿ ಲೀಡ್​ ಬ್ಯಾಂಕ್​ ವಾರ್ಷಿಕ ಕ್ರೆಡಿಟ್​ ಪ್ಲಾನ್​ ಬುಕ್ಲೆಟ್​ ಬಿಡುಗಡೆ ಮಾಡಲಾಯಿತು. ಜಗದೀಶ ಶೆಟ್ಟರ್​, ರಾಹುಲ್​ ಶಿಂಧೆ, ಎಚ್​.ಡಿ. ಕೋಳೇಕರ, ಪ್ರಶಾಂತ ೂಡಕೆ ಇತರರಿದ್ದರು.
Published on

ಬೆಳಗಾವಿ: ಎಲ್ಲರಿಗೂ ಬ್ಯಾಂಕಿಂಗ್​ ಸೌಲಭ್ಯ ತಲುಪಿಸುವ ಸಲುವಾಗಿ ಎಲ್ಲ ಬ್ಯಾಂಕ್​ ಶಾಖೆ ತೆರೆಯುವ ಅರ್ಜಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದ ಜಗದೀಶ ಶೆಟ್ಟರ ಬ್ಯಾಂಕ್​ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2024&25ನೇ ಸಾಲಿನ 4ನೇ ತೆಮಾಸಿಕ ಡಿಸಿಸಿ ಡಿಎಲ್​ಆರ್​ಸಿ ಸಭೆಯಲ್ಲಿ ಅವರು ಮಾತನಾಡಿದರು. ಬಾಕಿ ಇರುವ ಎಲ್ಲ ಸರ್ಕಾರಿ ಪ್ರಾಯೋಜಿತ ಯೋಜನೆಯ ಅರ್ಜಿಗಳನ್ನು ತೆರವುಗೊಳಿಸಲು ನಿರ್ದೇಶನ ನೀಡಿದರು.

ಜಿಪಂ ಸಿಇಒ ರಾಹುಲ್​ ಶಿಂಧೆ ಮಾತನಾಡಿ, ಬಾಕಿ ಎಲ್ಲ ಸರ್ಕಾರಿ ಪ್ರಾಯೋಜಿತ ಯೋಜನೆಯ ಅರ್ಜಿಗಳನ್ನು ನಿಗದಿತ ಸಮಯದೊಳಗೆ ತೆರವುಗೊಳಿಸಲು ಸೂಚಿಸಿದರು. ಸುಗರ್​ ಕ್ಯಾನ್​ ಹಾರ್ವೇಸ್ಟ್​ ಮಷಿನ್​ ಸಾಲ ಪ್ರಸ್ತಾವನೆಗಳನ್ನು ನಿಗದಿತ ಸಮಯದೊಳಗೆ ಮಂಜೂರು ಮಾಡಿದ್ದಕ್ಕಾಗಿ ಆಯ್ದ ಬ್ಯಾಂಕುಗಳಿಗೆ ಪ್ರಶಂಸಿದರು.

ಬೆಳಗಾವಿ ಕೃಷಿ ಜಂಟಿ ನಿರ್ದೇಶಕ ಎಚ್​.ಡಿ. ಕೋಳೇಕರ ಮಾತನಾಡಿ, ಬೆಳಗಾವಿ ಜಿಲ್ಲೆ ಅಗ್ರೀಕಲ್ಚರ್​ ಇನ್​್ರಾಸ್ಟ್ರಕ್ಚರ್​ ಫಂಡ್​ ಯೋಜನೆಯಲ್ಲಿ ರಾಜ್ಯದಲ್ಲಿ 4ನೇ ಸ್ಥಾನ ಪಡೆದಿದೆ ಮತ್ತು ಫಿಎಂಎಫ್​ಎಂಇ ಯೋಜನೆಯಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ತಿಳಿಸಿದರು.

ಭಾರತೀಯ ರಿಸರ್ವ್​ ಬ್ಯಾಂಕ್​ ಸಹಾಯಕ ಜನರಲ್​ ಮ್ಯಾನೇಜರ್​ ಪ್ರಭಾಕರನ್​, ಆರ್​ಬಿಐ ಮಾರ್ಗಸೂಚಿಯ ಇತ್ತೀಚಿನ ಬದಲಾವಣೆಗಳ ಕುರಿತು ವಿವರಿಸಿದರು. ನಬಾರ್ಡ್​, ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಅಭಿನವ ಯಾದವ ಇತ್ತೀಚಿನ ನಬಾರ್ಡ್​ ಯೋಜನೆಗಳ ಬಗ್ಗೆ ವಿವರಿಸಿದರು.

ಬೆಳಗಾವಿ ಲೀಡ್​ ಬ್ಯಾಂಕ್​ 2025&26ನೇ ಸಾಲಿನ ವಾರ್ಷಿಕ ಕ್ರೆಡಿಟ್​ ಪ್ಲಾನ್​ ಬುಕ್ಲೆಟ್​ ಬಿಡುಗಡೆಗೊಳಿಸಲಾಯಿತು. ಜನಸುರಾ ಯೋಜನೆಯಡಿ ಪಿಎಂಜೆಜೆಬಿವೈ ಮತ್ತು ಪಿಎಂಎಸ್​ಬಿವೈನಲ್ಲಿ ಅತ್ಯುತ್ತಮ ಸಾಧನೆಗಾಗಿ ಕೆನರಾ ಬ್ಯಾಂಕ್​, ಕರ್ನಾಟಕ ಗ್ರಾಮೀಣ ಬ್ಯಾಂಕ್​ ಮತ್ತು ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಲ್ಲ ಬ್ಯಾಂಕ್​ ಮತ್ತು ಲೈನ್​ ಇಲಾಖೆ ಪ್ರತಿನಿಧಿಗಳು ಇದ್ದರು. ಲೀಡ್​ ಬ್ಯಾಂಕ್​ ಮ್ಯಾನೇಜರ್​ ಪ್ರಶಾಂತ ೂಡಕೆ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net