

ಧಾರವಾಡ: ಪ್ರಸಕ್ತ 2024- 25ನೇ ಸಾಲಿಗೆ ಜಿಲ್ಲೆಯ ವಾರ್ಷಿಕ ವಿತ್ತೀಯ ಯೋಜನಾ ಗುರಿಯನ್ನು ಎಲ್ಲ ಬ್ಯಾಂಕ್‌ಗಳು ಕಾಲಮಿತಿಯಲ್ಲಿ ಪ್ರಗತಿ ಸಾಽಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ.ಕೆ. ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಪ್ರಗತಿ ಪರಿಶೀಲನಾ ಮತ್ತು ಜಿಲ್ಲಾ ಬ್ಯಾಂಕರ್ಸ್ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಪ್ರಸಕ್ತ ವಾರ್ಷಿಕ ವಿತ್ತೀಯ ಯೋಜನೆಯಲ್ಲಿ ಬೆಳೆಸಾಲ 2003.74 ಕೋಟಿ ರೂ., ಕೃಷಿ ಅವಽ ಸಾಲ 1,223.11 ಕೋಟಿ ರೂ., ಸೂಕ್ಷ÷್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ 8,096.24 ಕೋಟಿ ರೂ., ಇತರೆ ಆದ್ಯತಾ ವಲಯಕ್ಕೆ 774.50 ಕೋಟಿ ರೂ. ಮತ್ತು ಆದ್ಯತಾ ರಹಿತ ವಲಯಕ್ಕೆ 7,341.77 ಕೋಟಿ ರೂ. ಸೇರಿ 20,053.53 ಕೋಟಿ ರೂ. ಸಾಲ ವಿತರಣೆಯ ಗುರಿ ಹೊಂದಲಾಗಿದೆ ಎಂದರು.
ಜಿಲ್ಲಾ ಅಗ್ರಣೀಯ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಪ್ರಭುದೇವ ಎನ್.ಜಿ. 2023- 24ನೇ ಸಾಲಿನ ವಾರ್ಷಿಕ ಸಾಲದ ಯೋಜನೆಯ ಮುಖ್ಯಾಂಶ ಮತ್ತು 2024ರ ಮಾರ್ಚ್ ತ್ರೆÊಮಾಸಿಕ ಅಂತ್ಯದ ಪ್ರಗತಿ ವಿವರಿಸಿದರು.
ಆರ್‌ಬಿಐ ಅಽಕಾರಿ ಅರುಣಕುಮಾರ ಪಿ. ಆರ್‌ಬಿಐ ಮಾರ್ಗಸೂಚಿ ಮತ್ತು ನೀತಿ ವಿವರಿಸಿದರು. ನಬಾರ್ಡ್ ಬ್ಯಾಂಕ್‌ನ ಡಿಡಿಎಂ ಮಯೂರ ಕಾಂಬಳೆ ಮಾತನಾಡಿದರು. ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಪ್ರಶಾಂತ ಸ್ವಾಗತಿಸಿದರು. ವಿವಿಧ ಬ್ಯಾಂಕ್‌ಗಳ ಮುಖ್ಯಸ್ಥರು, ಪ್ರತಿನಿಽಗಳು, ವಿವಿಧ ಇಲಾಖೆಗಳ ಅಽಕಾರಿಗಳು ಭಾಗವಹಿಸಿದ್ದರು.