ಹುಬ್ಬಳ್ಳಿಯಲ್ಲಿ ಬ್ಯಾಂಕರ್ಸ್ ಭವನ ಉದ್ಘಾಟನೆ, ಒತ್ತಡ ಮುಕ್ತ ಜೀವನಕ್ಕೆ ಮನರಂಜನೆ ಅಗತ್ಯ

IMG-20230604-WA0009-2.jpg
Published on

ಹುಬ್ಬಳ್ಳಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬ್ಯಾಂಕ್ಗಳು ಸೇರಿದಂತೆ ವಿವಿಧೆಡೆ ಕೆಲಸ ಮಾಡುವವರಿಗೆ ಒತ್ತಡ ಜಾಸ್ತಿ ಆಗುತ್ತಿದೆ. ಇದರಿಂದ ಮುಕ್ತಿ ಪಡೆಯಲು ಎಲ್ಲರೂ ಒಂದೆಡೆ ಸೇರಿ ಮನಸ್ಸಿಗೆ ಮುದ ನೀಡುವ ಸಾಂಸತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಅಗತ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇಲ್ಲಿಯ ವಿದ್ಯಾನಗರ ಅಕ್ಷಯ ಕಾಲನಿಯಲ್ಲಿ ಭಾನುವಾರ ಬ್ಯಾಂಕರ್ಸ್ ಕ್ಲಬ್ ವತಿಯಿಂದ ನಿಮಿರ್ಸಲಾಗಿರುವ ಬ್ಯಾಂಕರ್ಸ್ ಭವನ ಉದ್ಘಾಟನೆ ಸಮಾರಂಭದಲ್ಲಿ ವಿಶೇಷ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ದೇಶದ ಅರ್ಥ ವ್ಯವಸ್ಥೆ ಸುಧಾರಣೆಯಲ್ಲಿ ಬ್ಯಾಂಕ್ಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಬ್ಯಾಂಕ್ ಸಿಬ್ಬಂದಿ ಸದಾ ಉತ್ಸಾಹದಿಂದ ಕೆಲಸ ಮಾಡಬೇಕಾದರೆ ಯೋಗ, ವ್ಯಾಯಾಮದಂತಹ ಚಟುವಟಿಕೆಗಳಿಗೂ ಮಹತ್ವ ನೀಡಬೇಕು. ಇದು ಮನೋರಂಜನೆಯ ತಾಣವಾಗಬೇಕು ಎಂದು ಸಲಹೆ ನೀಡಿದರು.

ದಶಕದ ಹಿಂದೆ ಜಗತ್ತಿನ ಕುಸಿಯುತ್ತಿರುವ ಆಥಿರ್ಕತೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿತ್ತು. 2014ರ ನಂತರ ಆಥಿರ್ಕತೆ ಸರಿ ದಾರಿಗೆ ಬರುತ್ತಿದೆ. ಕಳೆದ ಐದು ವರ್ಷದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಸುಧಾರಣೆ ಕ್ರಮಗಳಿಂದಾಗಿ ಜಗತ್ತಿನ 5ನೇ ಅತಿ ದೊಡ್ಡ ಆಥಿರ್ಕತೆಯಾಗಿ ಹೊರಹೊಮ್ಮಿದೆ ಎಂದರು.

ಭವನದ ಉದ್ಘಾಟನೆ ನೆರವೇರಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಸಂಟನೆ ಮುಖ್ಯವಾಗಿದೆ. ಬ್ಯಾಂಕ್ ಅಧಿಕಾರಿಗಳು ಒಂದಾಗಿ ಸ್ವಂತ ಖಚಿರ್ನಲ್ಲಿ ಭವನ ನಿಮಿರ್ಸಿರುವುದು ಶ್ಲಾನೀಯ ಕಾರ್ಯ. ಇಲ್ಲಿ ಕುಟುಂಬದ ಎಲ್ಲರೂ ಸೇರಬೇಕು. ಮಾತುಕತೆ, ಹರಟೆ ಮೂಲಕ ಪರಸ್ಪರ ಬಾಂಧವ್ಯ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬ್ಯಾಂಕ್ ಕೆಲಸ ಎಂದರೆ ಅದು ಸುಲಭವಲ್ಲ. ಹತ್ತಾರು ಟೆನ್ಶನ್ ಇರುತ್ತವೆ. ಜನರಿಗೆ ಉತ್ತಮ ಸೇವೆ ನೀಡಲು ಸಿಬ್ಬಂದಿ ನಿತ್ಯವೂ ಹೆಣಗಾಡುತ್ತಾರೆ. ಹಾಗಾಗಿ ವಾರದಲ್ಲಿ ಒಂದು ದಿನ ಮನೋರಂಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಭವನದ ಕಾರ್ಯ ಚಟುವಟಿಕೆಗಳಿಗೆ ಅಗತ್ಯವಾದರೆ ಶಾಸಕರ ನಿಧಿಯಿಂದ ಹಣ ಒದಗಿಸಲು ತಾವು ಸಿದ್ಧ ಎಂದು ಹೊರಟ್ಟಿ ಅವರು ಹೇಳಿದರು.

ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಎಂ. ವಿಜಯಕುಮಾರ, ಕೆಸಿಸಿಐ ಅಧ್ಯಕ್ಷ ವಿನಯ ಜವಳಿ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂದ ಅಧ್ಯಕ್ಷ ಜಗದೀಶ ಮಠದ, ಸುರೇಶ ಎಂಟರಪೆಸಸ್ ಎಂಡಿ ಸುರೇಶ ಶೇಜವಾಡಕರ, ಆರ್. ಸತೀಶ, ಬಸಂತಕುಮಾರ ಪಾಟೀಲ, ಎಂ.ವಿ. ಕರಮರಿ, ಬಸವರಾಜ ಅಳಗವಾಡಿ, ಗೋವಿಂದರಾಜು, ಗೋವಿಂದ ಜೋಶಿ, ಬಾಪುಗೌಡ ಬಿರಾದಾರ ಇತರರು ಭಾಗವಹಿಸಿದ್ದರು.

ಬ್ಯಾಂಕರ್ಸ್ ಕ್ಲಬ್ ಅಧ್ಯಕ್ಷ ಡಾ. ಡಿ.ಜಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕರ್ಸ್ ಕ್ಲಬ್ ಉಪಾಧ್ಯಕ್ಷ ರಮೇಶ ಪರ್ವತಿಕರ ಸ್ವಾಗತಿಸಿದರು. ಬಸವರಾಜ ರ್ಗುಕಿ ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net