

ಬಂಕಾಪುರ: ಬೊಲೆರೊ ವಾಹನ ಮತ್ತು ಅದರಲ್ಲಿದ್ದ ಖಾಸಗಿ ದೂರವಾಣಿ ಕಂಪನಿಯ 5ಜಿ ಸಾಮಗ್ರಿ ಸೇರಿ ಒಟ್ಟು 9.37 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪಟ್ಟಣದ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.
ಆರೋಪಿಗಳಾದ ಹುಬ್ಬಳ್ಳಿ ವಿದ್ಯಾನಗರದ ಸಣ್ಣಹನುಮಂತಪ್ಪ ರಾಮಚಂದ್ರಪ್ಪ ಮೊಡಿಕೇರ (25), ಹರಪನಹಳ್ಳಿ ಕೆ. ಸುರೇಶ ಕರಬಸಪ್ಪ (36) ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಳೆದ ಅಗಸ್ಟ್ 31ರಂದು ಬಂಕಾಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹಳ್ಳಿಕೇರಿ ಬಸವೇಶ್ವರ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಬೊಲೆರೊ ವಾಹನ ಮತ್ತು ಅದರಲ್ಲಿದ್ದ ಖಾಸಗಿ ದೂರವಾಣಿ ಕಂಪನಿಯ 5ಜಿ ಸಾಮಗ್ರಿಗಳ ಕಳ್ಳತನವಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಬಂಕಾಪುರ ಪೊಲೀಸರು ಹಾವೇರಿ ಎಸ್‌ಪಿ ಡಾ. ಶಿವಕುಮಾರ ಗುಣಾರೆ, ಹೆಚ್ಚುವರಿ ಎಸ್‌ಪಿ ಸಿ. ಗೋಪಾಲ, ಡಿವೈಎಸ್‌ಪಿ ಮಂಜುನಾಥ ಜಿ., ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಕುಂಬಾರ, ಪಿಎಸ್‌ಐ ನಿಂಗರಾಜ ಕರಕಣ್ಣನವರ ಕಾರ್ಯಾಚರಣೆ ನಡೆಸಿದ್ದರು.
ಎಎಸ್‌ಐ ಡಿ.ಎನ್. ಕೂಡಲ, ಎ.ಕೆ. ನದಾಫ್, ಆಸ್ಕರ ಅಲಿ ನದಾಫ್, ಗೋವಿಂದ ಲಮಾಣಿ, ರಮೇಶ ಕುರಿ, ಫಕೀರಪ್ಪ ಕಳ್ಳಿಮನಿ, ಶಂಭುಲಿಂಗ ಯಲಿವಾಳ, ಜಬೀವುಲ್ಲಾ ದೊಡ್ಡಮನಿ, ಕೆ.ಕೆ. ನದಾಫ್, ಸತೀಶ ಮಾರಕಟ್ಟಿ, ಮಾರುತಿ ಹಾಲಬಾವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.