1.34 ಲಕ್ಷ ರೂ. ಮೌಲ್ಯದ ಶ್ರೀಗಂಧದ ಗಿಡ ವಶ

Crime Logo
Published on

ಬಂಕಾಪುರ: ಶ್ರೀಗಂಧದ ಗಿಡ ಕಡಿದುಕೊಂಡು ಬಂದು ಮನೆಯಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಆತನಿಂದ 1.34 ಲಕ್ಷ ರೂ. ಮೌಲ್ಯದ 26 ಕೆ.ಜಿ. ಶ್ರೀಗಂಧದ ಗಿಡ ವಶಪಡಿಸಿಕೊಂಡ ಘಟನೆ ಬುಧವಾರ ಸಂಭವಿಸಿದೆ.
ಪಟ್ಟಣದ ಮಾಗೀಕೆರೆ ಬಳಿಯ ನಿವಾಸಿ ರಮೇಶ ಪಾಂಡುರಂಗ ಸಿದ್ದುನವರ (38) ಬಂಧಿತ ಆರೋಪಿ.
ಈತ ಪಟ್ಟಣದ ಹೊರವಲಯದ ಸಣ್ಣ ಹಳ್ಳದ ದಂಡಿಯಲ್ಲಿ ಬೆಳೆದಿದ್ದ ಶ್ರೀಗಂಧದ ಗಿಡವನ್ನು ಕಟಾವು ಮಾಡಿಕೊಂಡು ಬಂದು ಮನೆಯ ಹಿತ್ತಲಿನಲ್ಲಿ ಇಟ್ಟುಕೊಂಡಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿ ಶ್ರೀಗಂಧದ ಗಿಡದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net