ಬಂಕಾಪುರ ಬಳಿ ಕಾರು ಪಲ್ಟಿ ಮಹಿಳೆ ಸಾವು

Crime Logo
Published on

ಬಂಕಾಪುರ: ಕಾರು ಪಲ್ಟಿಯಾಗಿ ಅದರಲ್ಲಿದ್ದ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಪಟ್ಟಣದ ಹಾನಗಲ್ಲ ರಸ್ತೆಯಲ್ಲಿ ಸೋಮವಾರ ನಡೆದಿದೆ.
ಹಾನಗಲ್ಲ ತಾಲೂಕಿನ ಆನವಟ್ಟಿ ಗ್ರಾಮದ ಪುಷ್ಪಾ ಪರಸಪ್ಪ ಹುಣಸಳ್ಳಿ (50) ಮೃತ ಮಹಿಳೆ.
ಇವರು ಕಾರಿನಲ್ಲಿ ಹಾನಗಲ್ಲ ಕಡೆಯಿಂದ ಬಂಕಾಪುರಕ್ಕೆ ಬರುತ್ತಿದ್ದ ಸಮಯದಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ ಕಾರಿನಲ್ಲಿದ್ದ ಪುಷ್ಪಾ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net