

ಬಂಕಾಪುರ: ಪಟ್ಟಣದ ಮಧ್ಯದಲ್ಲಿ ಹಾಯ್ದು ಹೋಗಿರುವ ಕಾರವಾರ-ಇಳಕಲ್ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸ್ಮಶಾನಕ್ಕೆ ಇಲಾಖೆಗಳ ಪರವಾನಗಿ ಇಲ್ಲದೇ ಕಾಂಪೌಂಡ್ ಕಟ್ಟಲು ಮುಂದಾದ ವಕ್ಪ್ ಬೋರ್ಡ್ ಕ್ರಮವನ್ನು ಸಾರ್ವಜನಿಕರು ತಡೆದ ಘಟನೆ ಶುಕ್ರವಾರ ನಡೆದಿದೆ.
ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ರಸ್ತೆಯ ಎರಡೂ ಬದಿ ಒಂದು ಕೋಮಿಗೆ ಸೇರಿದ್ದು ಎನ್ನಲಾದ ಸ್ಮಶಾನವಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸ್ವಚ್ಛತೆ ಕೈಗೊಂಡಿದ್ದ ಬೆಂಗಳೂರಿನ ವಕ್ಪ್ ಬೋರ್ಡ್ ಅಧಿಕಾರಿ ಎಂದು ಹೇಳಿಕೊಂಡಿದ್ದ ವ್ಯಕ್ತಿ, ಶುಕ್ರವಾರ ಬೆಳಗ್ಗೆ ಜೆಸಿಬಿ ಮೂಲಕ ರಸ್ತೆ ಪಕ್ಕದ ಮರಗಳನ್ನು ಕಿತ್ತು ಹಾಕಿಸಿದ್ದರು. ಬಳಿಕ ಕಾಂಪೌಂಡ್ ಕಟ್ಟಲು ಬುನಾದಿ ತೆಗೆಯಲು ಮುಂದಾದಾಗ ಸಾರ್ವಜನಿಕರು ತಡೆದು, ಪರವಾನಗಿ ಇಲ್ಲದೆ ಕಾಮಗಾರಿ ಮಾಡದಂತೆ ಸೂಚಿಸಿದ್ದಾರೆ. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ನಿಂಗರಾಜ ಕೆ.ವೈ., ಪುರಸಭೆ ಮುಖ್ಯಾಧಿಕಾರಿ ಎ. ಶಿವಪ್ಪ, ಲೊಕೋಪಯೋಗಿ ಇಲಾಖೆ ಇಂಜಿನಿಯರ್ ಪವನಕುಮಾರ ಅವರು ಕಾಮಗಾರಿ ತಡೆದು, ಕೆಲಸ ಮಾಡುತ್ತಿದ್ದ ಜೆಸಿಬಿಯನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಲೋಕೋಪಯೋಗಿ ಇಲಾಖೆ ಸೇರಿ ಯಾವುದೇ ಇಲಾಖೆಯ ಪರವಾನಗಿ ಪಡೆಯದೇ ರಸ್ತೆ ಪಕ್ಕದ ಐದಾರು ಮರಗಳನ್ನು ಬುಡ ಸಮೇತ ಕಿತ್ತು ಹಾಕಿ ಕಾನೂನು ಬಾಹಿರ ಕೆಲಸ ಮಾಡಿದ್ದಾರೆ. ಕಳೆದ ನಾಲ್ಕೆ ೖದು ವರ್ಷಗಳಿಂದ ಪ್ರತಿವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ಒಂದಿಲ್ಲೊಂದು ಘಟನೆಗಳನ್ನು ಸೃಷ್ಟಿಸುವ ಅಂಜುಮನ್ ಸಂಸ್ಥೆ ಸಮಾಜದಲ್ಲಿ ಕೋಮುಗಲಭೆ ಎಬ್ಬಿಸುವಂತಹ ಹುನ್ನಾರ ಮಾಡುತ್ತಿದೆ. ಕೂಡಲೇ ಇಂತಹ ಘಟನೆಗಳು ನಡೆಯದಂತೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು.| ಗಂಗಾಧರ ಮಾಮ್ಲೇಪಟ್ಟಣಶೆಟ್ಟರ್ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಪಟ್ಟಣದ ಕಾರವಾರ-ಇಳಕಲ್ ಹೆದ್ದಾರಿ ಪಕ್ಕದಲ್ಲಿ ಪರವಾನಗಿ ಇಲ್ಲದೇ ನಡೆಸುತ್ತಿದ್ದ ಕಾಮಗಾರಿ ತಡೆಯಲಾಗಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಪರವಾನಗಿ ಇಲ್ಲದೆ ಕಾಮಗಾರಿ ಕೈಗೊಂಡವರ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ದೂರು ನೀಡಲಾಗುವುದು.| ಪವನಕುಮಾರ ಗುಬ್ಬೇರ ಎಇ ಲೋಕೋಪಯೋಗಿ ಇಲಾಖೆ ಶಿಗ್ಗಾಂವಿ