

ಬಂಕಾಪುರ: ಪ್ರತಿಯೊಬ್ಬರಿಗೂ ತಂದೆ-ತಾಯಿಯೇ ಮೊದಲ ಗುರು. ಇವರನ್ನು ಪೂಜಿಸುವವರು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಪಟ್ಟಣದ ಅರಳೆಲೆಮಠದ ಶ್ರೀ ರೇವಣಶಿದೆಟಛೀಶ್ವರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿನ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಾಯಿ ಗ್ರಾಮೀಣಾಭಿವೃದಿಟಛಿ ಸೇವಾ ಸಂಸ್ಥೆ ವತಿಯಿಂದ ಗುರು ಪೂರ್ಣಿಮೆ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಭಾರತದ ಹೃದಯ ವೈಶಾಲ್ಯ, ಸಂಸ್ಕೃತಿ, ಆಚಾರ ವಿಚಾರ, ಗುರು-ಹಿರಿಯರನ್ನು ಗೌರವಿಸುವ ಸಂಪ್ರದಾಯ ಜಗತ್ತಿನಾದ್ಯಂತ ತನ್ನದೇ ಛಾಪು ಮೂಡಿಸಿದೆ. ಗುರುವೆಂದರೆ ಬರಿ ಪಾಠ, ಪ್ರವಚನ ನೀಡುವುದಿಲ್ಲ. ಬದುಕಿನ ಸನ್ಮಾರ್ಗ, ನೈಜ ಜೀವನ ತೋರಿಸಿಕೊಟ್ಟು, ಶಿಷ್ಯ ಬಳಗವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮರ್ಗದರ್ಶಕರು ಎಂದರು.
ಕೊಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಪಕಿ ಪಾರ್ವತೆವ್ವ ಸಂಶಿ ಮತ್ತು ಕುಂದೂರ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ನಾಗೇಂದ್ರ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಬೆಳಗ್ಗೆ 5 ಗಂಟೆಗೆ ನಗರ ಸಂಕೀರ್ತನೆ, ಕಾಕಡಾರತಿ, ಮಂಗಳ ಸ್ನಾನ, ಶ್ರೀ ಸತ್ಯನಾರಾಯಣ ಪೂಜೆ ಜರುಗಿತು. ದಿವಾಕರ ವರ್ಣೆಕರ, ಸತೀಶ ವಳಗೇರಿ, ರವಿ ವರ್ಣೆಕರ, ಮಂಜನಗೌಡ ಪಾಟೀಲ, ಬಸವರಾಜ ನರೇಗಲ್, ಪರಶುರಾಮ ಭವಾನಿ, ವೆಂಕಟೇಶ ದೈವಜ್ಞ, ಬಸಯ್ಯ ಚಿಕ್ಕಮಠ, ಪರಶುರಾಮ ಜೋಗಿನ, ಮಂಜು ಹುಲ್ಲಾಳ, ಮಲ್ಲಿಕಾರ್ಜುನ ಕುಂಬಾರ, ಸಾಯಿ ಸೇವಾ ಸಮಿತಿ ಸದಸ್ಯರು ಇದ್ದರು.