

ಬಂಕಾಪುರ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಜಿ+1 ಮಾದರಿಯ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಮಳೆ ಆರಂಭಕ್ಕೂ ಮುನ್ನ ನೀಡಬೇಕು ಎಂದು ಫಲಾನುಭವಿಗಳು ಪುರಸಭೆ ಮುಖ್ಯಾಧಿಕಾರಿ ಎ. ಶಿವಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಅರ್ಹ ಫಲಾಲನುಭವಿಗಳಾಗಿರುವ ನಾವು ಅನೇಕ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ನಮಗೆ ಮನೆ ಬಾಡಿಗೆ ಕಟ್ಟಲು ಆಗುತ್ತಿಲ್ಲ. ಜೂ. 21ರೊಳಗೆ ಮನೆಗಳನ್ನು ವಿತರಿಸಬೇಕು. ತಪ್ಪಿದಲ್ಲಿ ಎಲ್ಲ ಫಲಾನುಭವಿಗಳು ಜೂ. 22ರಂದು ಪುರಸಭೆ ಎದುರು ಧರಣಿ ಮಾಡುತ್ತೇವೆ ಎಂದು ಫಲಾನುಭವಿಗಳು ಮನವಿಯಲ್ಲಿ ತಿಳಿಸಿದ್ದಾರೆ. ರತ್ನಾ ಛಲವಾದಿ, ನಿಂಗಪ್ಪ ಗಣಪ್ಪನವರ, ಗೋಪಾಲ ಸರ್ವದೆ, ಕಸ್ತೂರವ್ವ ಹೆಬ್ಬಾರ, ಕೆ.ಡಿ. ಡಂಬಳ ಇತರರು ಇದ್ದರು.