ಬ್ಯಾಂಕ್​ ಸಿಬ್ಬಂದಿ ಜಾಗೃತೆಯಿಂದ ಕಾರ್ಯನಿರ್ವಹಿಸಿ

17manju8
Published on

ಬೆಳಗಾವಿ: ಸೈಬರ್​ ಅಪರಾಧಿಗಳು ಕೇವಲ ಒಂದು ದಿನದ ಯೋಜನೆಯೊಂದಿಗೆ ಬ್ಯಾಂಕ್​ ದೋಚುವುದಿಲ್ಲ. ಆದರೆ, ಇದಕ್ಕಾಗಿ ಹಲವು ದಿನಗಳಿಂದ ಯೋಜನೆ ರೂಪಿಸಿ ಕೃತ್ಯ ಎಸಗುತ್ತಾರೆ. ಹೀಗಾಗಿ ಬ್ಯಾಂಕ್​ ಸಿಬ್ಬಂದಿ ಬಹಳ ಜಾಗೃತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಪುಣೆಯ ಕೋಮಲ ಇನ್ಫೋಟೆಕ್​ ಕಂಪನಿಯ ಹೇಮಂತ ದೇಶಮುಖ ಹೇಳಿದರು.

ನಗರದ ಮರಾಠ ಬ್ಯಾಂಕಿನ ಛತ್ರಪತಿ ಶಿವಾಜಿ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್​ ಸಂವು ಈಚೆಗೆ ಹಮ್ಮಿಕೊಂಡಿದ್ದ ಒಂದು ದಿನದ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸೈಬರ ಅಪರಾಧಿಗಳು ಬ್ಯಾಂಕಿನ ದತ್ತಾಂಶಗಳನ್ನು ಕದ್ದು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಬ್ಯಾಂಕಿನ ಪಾಸ್​ವರ್ಡ್​ ಕನಿಷ್ಠ 12 ರಿಂದ 16 ಅರಗಳಷ್ಟು ಉದ್ದವಾಗಿರಬೇಕು. ಆದ್ದರಿಂದ ಅದನ್ನು ಸುಲಭವಾಗಿ ಊಹಿಸಲಾಗುವುದಿಲ್ಲ ಎಂದರು.

ಜಿಲ್ಲಾ ಬ್ಯಾಂಕ್​ ಸಂದ ಉಪಾಧ್ಯ ಬಾಳಾಸಾಹೇಬ ಕಾಕತಕರ, ಮರಾಠ ಬ್ಯಾಂಕ್​ ಅಧ್ಯ ಬಾಳಾರಾಮ ಪಾಟೀಲ, ಪಯೋನೀಯರ್​ ಬ್ಯಾಂಕ್​ ಅಧ್ಯ ಪ್ರದಿಪ ಅಷ್ಟೇಕರ, ಬಸವೇಶ್ವರ ಬ್ಯಾಂಕ್​ ಅಧ್ಯ ರಮೇಶ ಕಳಸಣ್ಣವರ, ತುಕಾರಾಮ ಬ್ಯಾಂಕ್​ ಅಧ್ಯ ಪ್ರಕಾಶ ಮರಗಾಳೆ , ದೈವ ಬ್ಯಾಂಕಿನ ಮಂಜುನಾಥ ಸೇಠ, ವಿಸೆಲ ಇನ್ಫೋಟೆಕ್​ ಕಂಪನಿಯ ಸಚಿನ ಗುಂಜಿಕರ, ಫ್ಯೂಚರ್​ ಕಮ್ಯೂನಿಕೇಷನ್ಸ್​ ಪ್ರತಿನಿಧಿ ನಿತಿನ ಕದಂ, ಇನ್ನೋವೇವ್​ ಕಂಪನಿಯ ಅಮಿತ್​ ಲೋಕ್ರೆ ಮತ್ತು ಎಫಿನಿಕ್ಸ್​ನ ಡಾ.ಪವನ ಫಲಕ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net