ಬ್ಯಾಂಕ್ ಸಾಲಮೇಳ ಸದುಪಯೋಗವಾಗಲಿ

20Anand5
ಬೆಳಗಾವಿ ತಿಲಕವಾಡಿಯ ಮಿಲೇನಿಯಂ ಗಾರ್ಡನ್‌ನಲ್ಲಿ ದೀಪಾವಳಿ ಪ್ರಯುಕ್ತ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಬೃಹತ್ ಸಾಲಮೇಳವನ್ನು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಶಕೀಲ್ ಅಹ್ಮದ್‌ಉದ್ಘಾಟಿಸಿದರು. ವಿಕಾಸ ಭಾಗೋತ್ರ, ಸುಮಾ ಜಿ.ಕೆ. ಜಯಕುಮಾರ್ ಇದ್ದರು.
Published on

ಬೆಳಗಾವಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಿರುವ ಗೃಹ, ವಾಹನ ಸಾಲ ಮೇಳದ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಶಕೀಲ್ ಅಹ್ಮದ್ ಹೇಳಿದರು.

ನಗರದ ತಿಲಕವಾಡಿಯ ಮಿಲೇನಿಯಂ ಗಾರ್ಡನ್‌ದಲ್ಲಿ ಶನಿವಾರ ದೀಪಾವಳಿ ಪ್ರಯುಕ್ತ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಬೃಹತ್ ಸಾಲ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.ಎಸ್‌ಬಿಐ ಒಂದು ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾಲ ಯೋಜನೆಯ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬೇಕೆಂದರು.ಉಪ ಪ್ರಧಾನ ವ್ಯವಸ್ಥಾಪಕ ಪಿ.ಎಲ್.ಶ್ರೀನಿವಾಸ ರಾವ್ ಮಾತನಾಡಿ, ಸಾಲಮೇಳದಲ್ಲಿ ಗಹ ಮತ್ತು ಕಾರು ಸಾಲವನ್ನು ಆಕರ್ಷಕ ಬಡ್ಡಿದರದಲ್ಲಿ ನೀಡಲಾಗುತ್ತಿದೆ. ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳಿಗೆ ಗಹ ಸಾಲ ನೀಡುವ ಪ್ರಧಾನಮಂತ್ರಿಗಳ ಆವಾಸ್ ಯೋಜನೆ, ಅರ್ಬನ್ 2.0 ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಅರ್ಹ ಲಾನುಭವಿಗಳಿಗೆ ನಗರ ಪ್ರದೇಶದಲ್ಲಿ ಕೈಗೆಟುಕುವ ದರದ ಸೂರು ನಿರ್ಮಿಸಲು ಗಹ ಸಾಲ ದೊರೆಯಲಿದೆ. ಬ್ಯಾಂಕಿನಿಂದ ಪಡೆಯುವ ಸಾಲಕ್ಕೆ 1.80 ರೂ. ಲಕ್ಷದವರೆಗೆ ಸಬ್ಸಿಡಿ ನೀಡಲಾಗುತ್ತಿದೆ ಎಂದು ತಿಳಿಸಿದರು.ಪ್ರಾದೇಶಿಕ ವ್ಯವಸ್ಥಾಪಕ ವಿಕಾಸ ಭಾಗೋತ್ರ, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಸುಮಾ ಜಿ.ಕೆ, ಪ್ರಾದೇಶಿಕ ವ್ಯವಸ್ಥಾಪಕ ಜಯಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net